ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ನಿವೃತ್ತ ಶಿಕ್ಷಕಿಗೆ ಸನ್ಮಾನ
ಉಡುಪಿ: ಸಾಮಾಜಿಕ ಕಳಕಳಿಯುಳ್ಳ ರೋಟರಿಯಂತಹ ಸಂಸ್ಥೆಗಳು ಗುರು ಹಿರಿಯರನ್ನು ಅಭಿನಂದಿಸುವ,ಅವರ ಕೆಲಸ ಕಾರ್ಯಗಳನ್ನು ಗುರುತಿಸುವಂತಹ ಉತ್ತಮ ಕಾರ್ಯಗಳನ್ನು ಮಾಡಿದಾಗ ಕಲಿಸಿದ ಗುರುಗಳಿಗೆ ಧನ್ಯತಾ ಭಾವದ ಅನುಭವವಾಗುವುದು.ಅದರಲ್ಲೂ ಮನೆಗೆ ಬಂದು ಆತ್ಮೀಯತೆಯಿಂದ ಮಾಡುವ ಗುರುವಂದನೆ ಬಹಳ ಸಂತಸ ತರುತ್ತದೆ ಎಂದು ನಿವೃತ್ತ ಶಿಕ್ಷಕಿ ಪಿಲ್ಲು ಯಾನೆ ಶಾಲಿನಿ ಟೀಚರ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯಂದು ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕ ದಂಪತಿಗಳಿಗೆ ಅವರ ಸ್ವಗೃಹದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೊ.ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು. ಜಿಲ್ಲಾ ಶುಭಾಶಯ ಸಮಿತಿ ಸಭಾಪತಿ ರೊ.ಪೂರ್ಣಿಮಾ ಜನಾರ್ದನ್ ಸನ್ಮಾನ ಪತ್ರ ವಾಚಿಸಿದರು.
ಮಾಜಿ ಸಹಾಯಕ ಗವರ್ನರ್ ರೊ. ಮಹೇಶ್ ಕುಮಾರ್ ವಂದಿಸಿದರು. ರೊ.ಜನಾರ್ದನ್ ಕೊಡವೂರು ನಿರೂಪಿಸಿದರು., ರೊ.ರಾಘವೇಂದ್ರ ಪ್ರಭು, ರೊ.ಯಶೋದಾ ಕೇಶವ್, ರೊ.ವಿಜಯ ಬಂಗೇರ, ರೊ.ಚಂದ್ರಕಾಂತ, ಕೇಶವ್ ಕುಂದರ್, ಲಕ್ಷ್ಮೀಶ ಉಪಸ್ಥಿತಿತರಿದ್ದರು.