ಮಲ್ಪೆ–ತೀರ್ಥಹಳ್ಳಿ ರಾ.ಹೆದ್ದಾರಿ ದುರಸ್ಥಿ, ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಪ್ರಮೋದ್ ಮಧ್ವರಾಜ್ ಆಗ್ರಹ
ಉಡುಪಿ: ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ಮಲ್ಪೆ, ಕರಾವಳಿ ಜಂಕ್ಷನ್, ಮಣಿಪಾಲ ಟೈಗರ ಸರ್ಕಲ್ ಬಳಿ, ಪರ್ಕಳದವರೆಗೆ ನಾದುರಸ್ತಿಯಲ್ಲ್ಲಿದ್ದು, ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಬವಣೆ ಪಡುವಂತಹ ಪರಿಸ್ಥಿತಿ ಉಂಟಾಗಿರುತ್ತದೆ.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅನುದಾನ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ದುರಸ್ಥಿ ಮತ್ತು ಅಭಿವೃದ್ಧಿಗೆ ಬಿಡುಗಡೆಯಾದ ತಕ್ಷಣ ಗರಿಷ್ಠ ಅನುದಾನವನ್ನು ಮಲ್ಪೆ, ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ಯ ಮಲ್ಪೆ, ಕರಾವಳಿ ಜಂಕ್ಷನ್ ಮಣಿಪಾಲ, ಪರ್ಕಳ ಮುಂತಾದ ಪ್ರದೇಶಗಳಿಗೆ ಮೀಸಲಿಟ್ಟು ಕಾಮಗಾರಿಯನ್ನು ತಕ್ಷಣ ನಿರ್ವಹಿಸಬೇಕೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿಯವರಾದ ಲಕ್ಷ್ಮೀ ನಾರಾಯಣ ಮತ್ತು ಮುಖ್ಯ ಇಂಜಿನಿಯರ್ ಪೇಶ್ವೆಯವರನ್ನು ದೂರವಾಣಿ ಮೂಲಕ ಒತ್ತಾಯಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.