Home Mangalorean News Kannada News ಮಲ್ಪೆ: ಮೀನುಗಾರಿಕಾ ಬೋಟುಗಳ ಬ್ಯಾಟರಿ ಕಳವು- ಮೂವರು ಆರೋಪಿಗಳ ಬಂಧನ

ಮಲ್ಪೆ: ಮೀನುಗಾರಿಕಾ ಬೋಟುಗಳ ಬ್ಯಾಟರಿ ಕಳವು- ಮೂವರು ಆರೋಪಿಗಳ ಬಂಧನ

?
Spread the love

ಮಲ್ಪೆ: ಮೀನುಗಾರಿಕಾ ಬೋಟುಗಳ ಬ್ಯಾಟರಿ ಕಳವು- ಮೂವರು ಆರೋಪಿಗಳ ಬಂಧನ

ಉಡುಪಿ: ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನುಗಾರಿಕಾ ಬೋಟುಗಳ ಬ್ಯಾಟರಿಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೊಡವೂರು ವಿಬಿ ರೋಡ್ ನಿವಾಸಿ ಆಲ್ ಮುಹೀತ (20), ಬಲರಾಮ ನಗರದ ಆದರ್ಶ (19) ಮತ್ತು ವಡಭಾಂಡೇಶ್ವರದ ಯಾಸಿನ್ (18) ಎಂದು ಗುರುತಿಸಲಾಗಿದೆ.

ಜುಲೈ 14 ರಿಂದ 18 ಅವಧಿಯಲ್ಲಿ ಮಲ್ಪೆ ಬಂದರಿನಲ್ಲಿ ಲಂಗಾರು ಹಾಕಿದ್ದ ಎರಡು ಮೀನು ಗಾರಿಕಾ ಬೋಟುಗಳಿಗೆ ಅಳವಡಿಸಿದ್ದ ನಾಲ್ಕು ದೊಡ್ಡ ಬ್ಯಾಟರಿಗಳು ಕಳವಾಗಿದ್ದ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಪ್ರವೃತ್ತರಾದ ಮಲ್ಪೆ ಪಿ.ಎಸ್.ಐ. ತಿಮ್ಮೇಶ್ ಬಿನ್ ನೇತೃತ್ವದ ತಂಡ ಕಲ್ಯಾಡಿ ಜಂಕ್ಷನ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ರಿಟ್ಜ್ ಕಾರಿನಲ್ಲಿ ತಿರುಗಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯ ವೇಳೆ ಕಳವು ಮಾಡಿರುವುದನ್ನು ಆರೋಪಿತರು ಒಪ್ಪಿಕೊಂಡಿದ್ದಾರೆ. ಸುಮಾರು 56ಸಾವಿರ ಮೌಲ್ಯದ ಬೋಟಿನ ದೊಡ್ಡ ಬ್ಯಾಟರಿ -4 ಹಾಗೂ ಕಳ್ಳತನ ಮಾಡಲು ಉಪಯೋಗಿಸುವ KA21- M 7491 ಮಾರುತಿ ರಿಟ್ಜ್ ಕಾರನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ .

ಸದರಿ ಕಾರ್ಯಾಚರಣೆ ವಿಷ್ಣುವರ್ಧನ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ , ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜೈಶಂಕರ್ ಪೊಲೀಸ್ ಅಧೀಕ್ಷಕರು ಉಡುಪಿ ಉಪವಿಭಾಗ, ಮಲ್ಪೆ ಠಾಣೆಯ ಮಂಜುನಾಥ ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ತಿಮ್ಮೆಶ್ ಬಿ.ಎನ್ ರವರ ನೇತೃತ್ವದಲ್ಲಿ ಮಲ್ಪೆ ಪೊಲೀಸರಾದ ಎಎಸ್ಐ ಸುಧಾಕರ, ಬಿ, ಹೆಚ್.ಸಿ ಜಯರಾಮ , ಹೆಚ್ಸಿ ರತ್ನಾಕರ, ಹೆಚ್.ಸಿ ಶಶಿಧರ , ಹೆಚ್.ಸಿ ಪ್ರವೀಣ್ ಹೆಚ್.ಸಿ ಸಂತೋಷ್, ಹೆಚ್.ಸಿ ವಿಕ್ರಮ ಬೇರೆ ಟ್ರೋ , ಹಾಗೂ ಪಿ.ಸಿ. ಚೇತನ್ ಪಿತ್ರೋಡಿ, ಪಿಸಿ ರವಿರಾಜ್, ಪಿ.ಸಿ.ಸದಾನಂದ ಪಿಸಿ ಮಂಜುನಾಥ ಜೀಪು ಚಾಲಕರಾದ ಹೆಚ್.ಸಿ ಮಹಾಬಲಿ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ ,


Spread the love

Exit mobile version