ಮಲ್ಪೆ: ವಿದ್ಯುತ್ ಶಾಕ್ ನಿಂದಾಗಿ15 ವರ್ಷ ವಯಸ್ಸಿನಬಾಲಕ ಸಾವು
ಉಡುಪಿ: ಬಾವಿಯ ಪಂಪ್ ಸೆಟ್ಟನ್ನು ಮೇಲಕ್ಕೆತ್ತುವ ವೇಳೆ ವಿದ್ಯುತ್ ಅಫಘಾತದಿಂದಾಗಿ 15 ವರ್ಷ ವಯಸ್ಸಿನ ಬಾಲಕ ಸಾವನಪ್ಪಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದಲ್ಲಿ ನಡೆದಿದೆ.
ಮೃತ ಬಾಲಕನ್ನನ್ನು ಲಕ್ಷ್ಮೀನಗರ ನಿವಾಸಿ ಗೌತಮ್ (15) ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಗೌತಮ್ ತನ್ನ ನೆರೆಮನೆಯವರ ಬಾವಿಯಲ್ಲಿ ಹಾಕಿರುವ ಪಂಪ್ ಸೆಟ್ಟನ್ನು ಎತ್ತಲು ನೆರೆಮನೆಯವರಿಗೆ ಸಹಾಯ ಮಾಡಲು ತೆರಳಿದ್ದು ಈವೇಳೆ ವಿದ್ಯುತ್ ಪ್ರವಹಿಸಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಇದೆ ಸಮಯದಲ್ಲಿ ಮಳೆಯೂ ಬರುತ್ತಿದ್ದು ಸಿಡಿಲು ಕೂಡ ಇತ್ತು ಎನ್ನಲಾಗಿದೆ
ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.