ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ!

Spread the love

ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ!

ಉಡುಪಿ: ನವಜಾತ ಶಿಶುವಿನ ಮೃತದೇಹ ಮಲ್ಪೆಯ ಕಾಂಪ್ಲೆಕ್ಸ್ ವೊಂದರ ಶೌಚಾಲಯದಲ್ಲಿ ಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ ನ ಶೌಚಾಲಯಕ್ಕೆ ಕಟ್ಟಡದ ಮ್ಯಾನೇಜರ್ ಸುಹೇಲ್ ಎಂಬವರು ಹೋದಾಗ ಒಳಗೆ ನವಜಾತ ಶಿಶು ಮರಣಹೊಂದಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶೌಚಾಲಯದಲ್ಲೇ ಹೆರಿಗೆಯಾಗಿ ಶಿಶುವನ್ನು ಬಿಟ್ಟುಹೋಗಿರುವ ಶಂಕೆ ವ್ಯಕ್ತವಾಗಿದ್ದು, ತಾಯಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.ಸುಹೇಲ್ (27) ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments