ಮಳೆಯಿಂದಾಗಿ ಪ್ರಾಣ ಹಾನಿ ಪ್ರಕರಣ ವರದಿಯಾಗಿಲ್ಲ : ದ.ಕ. ಡಿಸಿ ಮುಲ್ಲೈ ಮುಗಿಲನ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬೆಳಗ್ಗಿನ ಜಾವ ಮೂರು ಗಂಟೆಯಿಂದ ಆರು ಗಂಟೆಯ ತನಕ ಭಾರೀ ಮಳೆಯಾಗಿದೆ. ಅದರಲ್ಲೂ ಬಜ್ಪೆ, ಮೂಲ್ಕಿ, ಉಳ್ಳಾಲ ಬೋಳಿಯಾರ್ ಹಾಗೂ ಮಂಗಳೂರಿನಲ್ಲಿ ಕಳೆದ ಸಂಜೆಯಿಂದ ಇವತ್ತು ಬೆಳಗ್ಗಿನ ವರೆಗೆ ಗರಿಷ್ಠ ಮಳೆಯಾಗಿದೆ ಎಂದು. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಳೆಯಿಂದಾಗಿ ಜಿಲ್ಲೆಯ ಎಲ್ಲಿಯೂ ಪ್ರಾಣ ಹಾನಿ ಪ್ರಕರಣ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಜ್ಪೆ ವಿಮಾನ ನಿಲ್ದಾಣದ ಬಳಿ ಗೋಡೆಕುಸಿತ, ನಗರದೊಳಗೆ ಕೊಟ್ಟಾರ ಚೌಕಿ, ಸುರತ್ಕಲ್, ಭಾರತ ನಗರದಲ್ಲಿ ಮಳೆಯಿಂದಾಗಿ ಸ್ವಲ್ಪ ಸಮಸ್ಯೆ ಆಗಿತ್ತು.ಮನೆಗಳಿಗೆ ನೀರು ನುಗ್ಗಿದ ಪ್ರಕರಣ ವರದಿಯಾಗಿತ್ತು. ಹವಾಮಾನ ಇಲಾಖೆಯ ಪ್ರಕಾರ ಮಳೆಯ ಅಬ್ಬರ ಕಡಿಮೆಯಾಗಿದೆ ಎಂದರು.
ಆದ್ಯಪಾಡಿಯಲ್ಲಿ ಗೋಡೆ ಕುಸಿತವಾಗಿ ಬಿದ್ದಿರುವ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ ಎಂದು ಹೇಳಿದರು. ಸುಬ್ರಹ್ಮಣ್ಯದಲ್ಲಿ ಜಾತ್ರೆ ನಡೆಯುತ್ತಿದೆ. ಜನರು ನದಿಗೆ ಇಳಿಯದಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.