Home Mangalorean News Kannada News ಮಳೆಯಿಂದ ಉಂಟಾದ ಸಮಸ್ಯೆಗೆ  ಬಿಜೆಪಿ ನಾಯಕರಿಂದ ಸೂಕ್ತ ಸ್ಪಂದನೆ

ಮಳೆಯಿಂದ ಉಂಟಾದ ಸಮಸ್ಯೆಗೆ  ಬಿಜೆಪಿ ನಾಯಕರಿಂದ ಸೂಕ್ತ ಸ್ಪಂದನೆ

Spread the love

ಮಳೆಯಿಂದ ಉಂಟಾದ ಸಮಸ್ಯೆಗೆ  ಬಿಜೆಪಿ ನಾಯಕರಿಂದ ಸೂಕ್ತ ಸ್ಪಂದನೆ

ಮಂಗಳೂರು: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಗೆ ಮಂಗಳೂರು ನಗರದ ಅಳಪೆ ಉತ್ತರ 51 ನೇ ವಾರ್ಡಿನ ಕಣ್ಣಗುಡ್ಡದಿಂದ ನೂಜಿಗೆ ಹೋಗುವ ರಸ್ತೆ ಮೇಲೆ ಮಣ್ಣು ಕುಸಿದು ಬಿದ್ದು ಸಾರ್ವಜನಿಕರಿಗೆ ನಡೆದಾಡಲು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿತ್ತು.

ಈ ಬಗ್ಗೆ ಗ್ರಾಮಸ್ಥರು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ವಸಂತ ಪೂಜಾರಿಯವರ ಗಮನಕ್ಕೆ ತರಲು ಅವರು ಸ್ಥಳವನ್ನು ಪರಿಶೀಲಿಸಿ ಮಂಗಳೂರು ನಗರ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದ್ದರು.

ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗೆ ಕೂಡಲೇ ಸ್ಪಂದಿಸಿದ ವೇದವ್ಯಾಸ್ ಕಾಮತ್ ಅವರು ಜೆಸಿಬಿ ಯಂತ್ರವನ್ನು ಕಳುಹಿಸಿಕೊಟ್ಟು ಮಣ್ಣನ್ನು ರಸ್ತೆಯಿಂದ ತೆಗೆಸಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಿಜೆಪಿ ನಾಯಕರ ಕಾರ್ಯಪ್ರವತ್ತತೆಗೆ ನೂಜಿ ಹಾಗೂ ಕಣ್ಣಗುಡ್ಡ ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


Spread the love

Exit mobile version