ಮಸಾಜ್ ಪಾರ್ಲರಿಗೆ ದಾಳಿ : ಹನ್ನೊಂದು ಜನರ ಬಂಧನ

Spread the love

ಮಸಾಜ್ ಪಾರ್ಲರ್ ಗೆ ದಾಳಿ : ಹನ್ನೊಂದು ಜನರ ಬಂಧನ

ಮಂಗಳೂರು: ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್ ರಸ್ತೆಯಲ್ಲಿರುವ ಟೋಪಾಝ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ಮೆ| ಸಂಜೀವಿನಿ ಆರ್ಯುವೇಧಿಕ್ ಥೆರಾಪಿ ಕ್ಲಿನಿಕ್ ಎಂಬ ಹೆಸರಿನ ಮಸಾಜ್ ಸೆಂಟರಿಗೆ ಸಿಸಿಬಿ ಪೊಲೀಸರು ಹಾಗೂ ಬಂದರು ಪೊಲೀಸ್ ಠಾಣೆಯ ಪೊಲೀಸರು ಧಾಳಿ ಮಾಡಿ 11 ಜನರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಬಂಟ್ವಾಳ ಫರಂಗೀಪೇಟೆ ನಿವಾಸಿ ಹರೀಶ್ ಶೆಟ್ಟಿ, ಕಣ್ಣೂರು ನಿವಾಸಿ ಸಿಕೆ ಪಟ್ಟಕಂಡಿ, ರವೂದ್, ಸಾದಕತುಲ್ಲಾ (31), ಮಂಗಳೂರು ನಿವಾಸಿ ಅಬ್ದುಲ್ ರೆಹಮಾನ್ (37), ಕಣ್ಣೂರು ನಿವಾಸಿ ಸಚೀಂದ್ರ ಎಮ್ (43), ದಿತಿನ್ ದಾಸ್ (25), ಶಿಬೂ ಕೆ, ಅನಸ್, ರಾಜೇಶ್, ಸಿಯಾದ್ ಟಿವಿ ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಟೋಪಾಝ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ಮೆ// ಸಂಜೀವಿನಿ ಆರ್ಯುವೇಧಿಕ್ ಥೆರಾಪಿ ಕ್ಲಿನಿಕ್ ಎಂಬ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬಂದರು ಪೊಲೀಸರು ಮಸಾಜ್ ಪಾರ್ಲರ್ ಗೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದ ಪೋಲಿಸರು, ಆರೋಪಿಗಳಿಂದ ಒಟ್ಟು 53,400/- ರೂಪಾಯಿ ನಗದು ಹಣ ಹಾಗೂ 13 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಗಳು ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತರಾಮ, ಬಂದರು ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಯೊಗೀಶ್ ಕುಮಾರ್ ಹಾಗೂ ಸಿಸಿಬಿ ಘಟಕದ ಪಿಎಸ್ ಐ ಹೆಚ್.ಡಿ.ಕಬ್ಬಾಳ್ ರಾಜ್ ಹಾಗೂ ಬಂದರು ಠಾಣೆಯ ಪಿಎಸ್ ಐ ಪ್ರದೀಪ್ ಟಿ.ಆರ್ ಹಾಗೂ ಸಿಸಿಬಿ ಘಟಕದ ಮತ್ತು ಬಂದರು ಪೊಲೀಸ್ ಠಾಣೆಯ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love