Home Mangalorean News Kannada News ಮಸಿ ಬಳಿಯುವುದರಿಂದ ಹೋರಾಟ ಹತ್ತಿಕ್ಕಲು ಅಸಾಧ್ಯ: ಅಬ್ದುಲ್ ರಝಾಕ್ ಕೆಮ್ಮಾರ

ಮಸಿ ಬಳಿಯುವುದರಿಂದ ಹೋರಾಟ ಹತ್ತಿಕ್ಕಲು ಅಸಾಧ್ಯ: ಅಬ್ದುಲ್ ರಝಾಕ್ ಕೆಮ್ಮಾರ

Spread the love

ಮಸಿ ಬಳಿಯುವುದರಿಂದ ಹೋರಾಟ ಹತ್ತಿಕ್ಕಲು ಅಸಾಧ್ಯ: ಅಬ್ದುಲ್ ರಝಾಕ್ ಕೆಮ್ಮಾರ

ಮಂಗಳೂರು: “ಮಸಿ ಬಳಿಯುವುದರ ಮೂಲಕ ಪ್ರಗತಿಪರ ಹೋರಾಟಗಾರರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪಿಎಫ್‍ಐ ರಾಜ್ಯ ಕಾರ್ಯದರ್ಶಿಯಾದ ಅಬ್ದುಲ್ ರಝಾಕ್ ಕೆಮ್ಮಾರ ಎಂದು ಹೇಳಿದರು.

ಅವರು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿ ಸಂಘಪರಿವಾರದ ಗೂಂಡಾಗಳು ಪರಂಪರಾಗತವಾಗಿ ನಡೆಸಿ ಬಂದಿರುವಂತಹ ಕುಕೃತ್ಯಗಳು ಇವತ್ತು ಹೊಸ ಮುಖಗಳಾಗಿ ಬದಲಾಗುತ್ತಿದೆ. ಯೋಗಿಶ್ ಮಾಸ್ಟರ್ ರಂತಹ ಚಿಂತಕರನ್ನು ಹಲ್ಲೆ ಮಾಡುವ ಮೂಲಕ ಮುಗಿಸುವುದಾದರೆ ಇದು ನಿಮ್ಮ ಹಗಲುಗನಸಾಗಿದೆ. ಇಂತಹ ಪ್ರಗತಿಪರರ ವಿಚಾರಗಳನ್ನು ಮುಂದಿನ ತಲೆಮಾರುಗಳಿಗೆ ಹಸ್ತಾಂತರಿಸುವ ಮೂಲಕ ಸಂಘಪರಿವಾರಕ್ಕೆ ತಕ್ಕ ಉತ್ತರವನ್ನು ನೀಡಬೇಕಾಗಿದೆ.”ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ಲಂಕೇಶ್ ಪತ್ರಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗೇಶ್ ಮಾಸ್ಟರ ಮೇಲೆ ನಡೆದ ಹಲ್ಲೆಯ ವಿರುದ್ಧ ಮಂಗಳೂರಿನಲ್ಲಿ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯಿತು. ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಕೆ. ಆಶ್ರಫ್ ಅತಿಥಿ ಭಾಷಣ ಮಾಡಿದರು ಹಾಗೂ ಎಸ್‍ಡಿಪಿಐ ಜಿಲ್ಲಾ ಪ್ರ. ಕಾರ್ಯದರ್ಶಿ ಆಥಾವುಲ್ಲಾ ಜೋಕಟ್ಟೆ, ಯುನಿವೆಫ್ ಇದರ ಸಂಚಾಲಕರಾದ ಸಲೀಂ ಮಲಾರ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಫಯಾಝ್ ದೊಡ್ಡಮನೆ ಮತ್ತು ಪಿಎಫ್‍ಐ ಜಿಲ್ಲಾಧ್ಯಕ್ಷರಾದ ನವಾಝ್ ಉಳ್ಳಾಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹಾರಿಸ್ ಮಲಾರ್ ನಿರೂಪಿಸಿ ವಂದಿಸಿದರು.


Spread the love
2 Comments
Inline Feedbacks
View all comments
7 years ago

Communal minded people will do this if they get power.

Truth Seeker
7 years ago

“ಪ್ರಗತಿಪರ ಹೋರಾಟಗಾರರ ಹೋರಾಟ” ????
I don’t remember seeing any of these geniuses fighting for Uniform Civil Code, women’s rights, freedom of speech to criticize religions and other progressive ideas. In fact, they were celebrating similar ink attack on one Muthalik. Who do they think they are fooling? Someone needs to tell them that minority vote bank has become irrelevant in Modi’s new India. Sad day for you all – stop crying and go home!

wpDiscuz
Exit mobile version