ಮಸ್ಕತ್ತಿನಲ್ಲಿ ವಿಜೃಂಭಣೆಯಿಂದ ನಡೆದ ಓಮನ್ ಬಿಲ್ಲವಾಸ್ ಹತ್ತನೇ ವಾರ್ಷಿಕೋತ್ಸವ

Spread the love

ಮಸ್ಕತ್ತಿನಲ್ಲಿ ವಿಜೃಂಭಣೆಯಿಂದ ನಡೆದ ಓಮನ್ ಬಿಲ್ಲವಾಸ್ ಹತ್ತನೇ ವಾರ್ಷಿಕೋತ್ಸವ

ಒಮಾನ್ ಬಿಲ್ಲವಾಸ್ ಇದರ ಹತ್ತನೇ ವಾರ್ಷಿಕೋತ್ಸವವನ್ನು ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಒಮಾನ್ ದೇಶದ ಉದ್ದಗಲಕ್ಕೂ ಇರುವ 600 ಕ್ಕೂ ಅಧಿಕ ಸದಸ್ಯರು ಮಸ್ಕತ್ತಿನ ಸೀಮ್ ಎಂಬಲ್ಲಿಯ ರಮೀ ಡ್ರೀಮ್ ರೆಸಾರ್ಟಿನಲ್ಲಿ “ಬಿರುವ ಥÀುಡರ್ 2019” ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಅಭೂತಪೂರ್ವ ಸಮಾರಂಭವು ಸಮುದಾಯ ಸದಸ್ಯರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಯಿತು.

ಬ್ರಹ್ಮ ಶ್ರೀ ನಾರಾಯಣ ಗುರು ಅವರ ಆಶೀರ್ವಾದದೊಂದಿಗೆ ದೀಪ ಪ್ರಜ್ವಲನೆ ಮಾಡುವ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ಬ್ರಹ್ಮ ಶ್ರೀ ನಾರಾಯಣ ಗುರು ಅವರ ಸುಂದರ ಮಂಟಪವನ್ನು ಹೂವುಗಳೊಂದಿಗೆ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಉತ್ಸಾಹಭರಿತ ಸಮಿತಿ ಸದಸ್ಯರು ಮತ್ತು ಸ್ವಯಂಸೇವಕರು ಸಮಾರಂಭ ಪ್ರವೇಶ ಮತ್ತು ವೇದಿಕೆಯನ್ನು ಸುಂದರವಾಗಿ ಅಲಂಕರಿಸಿದ್ದು ವರ್ಣರಂಜಿತವಾಗಿತ್ತು.

ಒಮಾನ್ ಬಿಲ್ಲವಾಸ್ ಅಧ್ಯಕ್ಷರಾದ ಶ್ರೀಮತಿ ಸುಚೇತನ ಅಂಚನ್ ಅವರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಒಮಾನ್ ಬಿಲ್ಲವಾಸ್ ಸಂಸ್ಥೆಯನ್ನು ಕಟ್ಟಿ ಅತ್ಯುತ್ತಮ ಸೇವೆ ನಡೆಸಿರುವುದಕ್ಕಾಗಿ ಎಲ್ಲ ಸ್ಥಾಪಕ ಸದಸ್ಯರನ್ನು, ಸಮಿತಿಯ ಮಾಜಿ ಸದಸ್ಯರನ್ನು ಕೃತಜ್ಞತಾಪೂರ್ವಕವಾಗಿ ಅಧ್ಯಕ್ಷರು, ಉಪಾಧ್ಯಕ್ಷ ಜೊತೆಯಾಗಿ ಸನ್ಮಾನಿಸಿದರು.

ಭಾರತದಲ್ಲಿ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಮೂಲಕ ಅರ್ಹ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನವನ್ನು ಸ್ಥಾಪಿಸಿ ನಡೆಸಿಕೊಂಡು ಬಂದಿರುವುದಕ್ಕಾಗಿ ಒಮಾನ್ ಬಿಲ್ಲವಾಸ್ ಉಪಾಧ್ಯಕ್ಷರಾದ ಸುಹಾನ್ ಎಚ್ ಮತ್ತವರ ಪತ್ನಿ ಮಂಜಜಾ ಸುಹಾನ್ (ಮಾಜಿ ಕಮಿಟಿ ಸದಸ್ಯೆ) ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ದಶಮಾನೋತ್ಸವ ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವು ಮಕ್ಕಳ ಪ್ರಾರ್ಥನಾ ಹಾಡು ಮತ್ತು ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು. ಮಕ್ಕಳು, ಹೆಂಗಸರು ಮತ್ತು ಪುರುಷರು ದಿನದ ಕೊನೆಯ ವರೆಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಸಾಂಪ್ರದಾಯಿಕ ತುಳು ಜಾನಪದ ಗೀತೆಗಳು, ನೃತ್ಯ, ನಾಟಕ, ಹಾಸ್ಯ ವಿಡಂಬನೆ, ಸಿನಿಮಾ ನೃತ್ಯ ಮತ್ತು ಇತರ ಅತ್ಯುತ್ತಮ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಲಾಯಿತು.

ಸದಸ್ಯರು ಅತ್ಯುತ್ತಮ ತಂಡವಾಗಿ ಕೆಲಸ ಮಾಡಿದ ಪರಿಣಾಮ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು. ಸುಮಾರು 120 ಕ್ಕಿಂತಲೂ ಹೆಚ್ಚು ಮಂದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಾಂಸ್ಕೃತಿಕ ಸಮಿತಿಯ ಪ್ರಯತ್ನ ಶ್ಲಾಘನೀಯವಾಗಿತ್ತು. ಊಟ ಉಪಹಾರ ಸೇರಿಂದತೆ ಲಾಜಿಸ್ಟಿಕ್ಸ್ ತಂಡ ಕೂಡ ಪರಿಪೂರ್ಣ ವ್ಯವಸ್ಥೆಗಳನ್ನು ನೀಡಿದರು.

ಶ್ರೀ ಸಂದೀಪ್ ಸುವರ್ಣ (ಡಿ.ಜೆ. ಸ್ಯಾಂಡಿ) ವೇದಿಕೆಯ ಹಿನ್ನೆಲೆಯಲ್ಲಿ ಎಲ್‍ಇಡಿ ಪರದೆಯೊಂದಿಗೆ ಬೆಳಕು ಮತ್ತು ಧ್ವನಿಯನ್ನು ಸಂಯೋಜಿಸುವ ಮೂಲಕ ವೇದಿಕೆಯ ಪ್ರದರ್ಶನಕ್ಕೆ ಇನ್ನಷ್ಟು ಮೆರಗು ನೀಡಿದರು.

ಶ್ರೀ ದಯಾನಂದ್ ಪಾಲನ್ ಬರೆದು ನಿರ್ದೇಶಿಸಿದ ತುಳು ನಾಟಕ “ಆರ್ ತುಪಿಲಕ್ಕ ಅತ್ತ್”, ಮಸ್ಕತ್ತಿನ ಓಮನ್ ಬಿಲ್ಲವಾಸ್ ಸದಸ್ಯರು ಸಾದರಪಡಿಸಿದರು. ಶ್ರೀ ಹರೀಶ್ ಸುವರ್ಣ ನಿರ್ದೇಶಿಸಿದ “ಕಂಚಿಲ್ದ ಪರಕೆ” ನಾಟಕವನ್ನು ಸೊಹಾರ್ ಒಮಾನ್ ಬಿಲ್ಲವಾಸ್ ಸದಸ್ಯರನ್ನು ಪ್ರದರ್ಶಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿದ ನಿರ್ವಾಹಕರು, ನೃತ್ಯ ನಿರ್ದೇಶಕರು,ನಾಟಕ ನಿರ್ದೇಶಕರು, ಕಲಾವಿದರನ್ನು ಸಮಾರಂಭದ ಯಶಸ್ಸಿನ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಗ್ರ್ಯಾಂಡ್ ರಾಫೆಲ್ ಡ್ರಾದೊಂದಿಗೆ ಸಮಾರಂಭ ಮುಕ್ತಾಯವಾಯಿತು.

ಒಮಾನ್ ಬಿಲ್ಲವಾಸ್ ಅವರ ಪರವಾಗಿ ಶ್ರೀ ಶಿವಾನಂದ ಕೊಟ್ಯಾನ್ ಅವರು ಪ್ರಾಯೋಜಕರು, ಸ್ವಯಂಸೇವಕರು ಸೇರಿದಂತೆ ಭಾಗವಹಿಸಿದ ಎಲ್ಲರಿಗು ಧನ್ಯವಾದ ಸಲ್ಲಿಸಿದರು. ರಿಹರ್ಸಲ್ ನಡೆಸಲು ಸ್ಥಳಾವಕಾಶ ಒದಗಿಸಿದ ಶ್ರೀ ರಜನೀಶ್ ಸನಿಲ್ ಮತ್ತು ಶ್ರೀಮತಿ ಕವಿತಾ ಸನಿಲ್ ಅವರನ್ನು ವಿಶೇಷ ಕೊಡುಗೆ ನೀಡಿ ಗೌರವಿಸಲಾಯಿತು.
ಅನೇಕ ವ್ಯಕ್ತಿಗಳು ಮತ್ತು ಕಾಪೆರ್Çರೇಟ್ ಸಂಸ್ಥೆಗಳು ಈ ಮೆಗಾ ಸಮಾವೇಶಕ್ಕೆ ಬೆಂಬಲ ನೀಡಿದ್ದರು. ಅವರೆಂದರೆ ಗೋಲ್ಡ್ ಪ್ರಾಯೋಜಕರು ಶ್ರೀ. ಉದಯ್ ಕುಮಾರ್ (ನಮ ಆಂಡ್ ಪ್ರಾಜೆಕ್ಟ್ಸ್ ಎಂಬರ್ ಟೆಲಿಕಾಂ), ಶ್ರೀ ಅಶೋಕ್ ಪೂಜಾರಿ ( ಖಇಒಂS ಗುಂಪು, ಅತ್ಯುತ್ತಮ ಸೌಂದರ್ಯ) ಮತ್ತು ಶ್ರೀ ಮಹೇಶ್ ಸಾಲಿಯಾನ್, ಶ್ರೀ ರಜನೀಶ್ ಸನಿಲ್, ಶ್ರೀ ಚಂದ್ರಕಾಂತ್ ಕೊಟ್ಯಾನ್ ಮತ್ತು ಶ್ರೀ ಹರೀಶ್ ಸನಿಲ್


Spread the love