ಮಸ್ಕತ್ ಕನ್ನಡ ಸಂಘಕ್ಕೆ ನೂತನ ಪದಾಧಿಕಾರಿಗಳು
ಮಸ್ಕತ್ ಕನ್ನಡಿಗರಿಗೆ ಕನ್ನಡದ ಸಾಂಸ್ಕತಿಕ ಲೋಕವು ಮರೆತು ಹೋಗದಂತೆ ಮಾಡುವಲ್ಲಿ ಮಸ್ಕತ್ ಕನ್ನಡ ಸಂಘದ ಪಾತ್ರವು ಹಿರಿದಾದದ್ದು. ಕಳೆದ ಕೆಲವು ವರ್ಷಗಳಿಂದ ಮಸ್ಕತ್ ಕನ್ನಡ ಸಂಘವು ಆಯೋಜಿಸಿದ ಕಾರ್ಯಕ್ರಮಗಳು ಹಲವಾರು. ಇಲ್ಲಿನ ಕನ್ನಡ ಮಕ್ಕಳಿಗೆ ಕನ್ನಡವನ್ನು ಕಲಿಸಲು ಕನ್ನಡ ತರಗತಿಗಳು, ಭಾರತದಿಂದ ಕನ್ನಡ ಕಲಾವಿದರನ್ನು ಇಲ್ಲಿಗೆ ಕರಿಯಿಸಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಇಲ್ಲಿನ ಕನ್ನಡಿಗರನ್ನು ಒಗ್ಗೂಡಿಸಿ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಯುಗಾದಿ, ದಸರಾ, ರಾಜ್ಯೋತ್ಸವ, ದೀಪಾವಳಿ ಮುಂತಾದ ಹಬ್ಬಗಳ ಆಚರಣೆ – ಇವು ಅವುಗಳಲ್ಲಿ ಕೆಲವು. ಇಂತಹ ಚಟುವಟಿಕೆಗಳನ್ನು ನಡೆಸುತ್ತಾ ಇಲ್ಲಿನ ಕನ್ನಡಿಗರನ್ನು ಕ್ರೀಯಾಶೀಲರಾಗಿ ಇಟ್ಟಿರುವ ಈ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆದಿದ್ದು ಹೊಸ ಪದಾಧಿಕಾರಿಗಳ ನೇಮಕವಾಗಿದೆ. ಹೊಸ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ:-
ಈ ವರ್ಷದ ಮಸ್ಕತ್ ಕನ್ನಡಿಗರ ಸಾಂಸ್ಕತಿಕ ಚಟುವಟಿಕೆಗಳ ಚುಕ್ಕಾಣಿ ಹಿಡಿದಿರುವ ಇವರಿಗೆ ಕನ್ನಡದ ಕಂಪನ್ನು ಮಸ್ಕತ್ತಿನಲ್ಲಿ ಹರಿಸಲು ಕನ್ನಡಾಂಬೆ ಇನ್ನಷ್ಟು ಶಕ್ತಿಯನ್ನು ಕೊಡಲಿ, ಇವರ ಮುಂದಾಳತ್ವದಲ್ಲಿ ಕನ್ನಡಿಗರ ಚಟುವಟಿಗೆಗಳು ಬಹಳಷ್ಟು ನಡೆಯಲಿ ಕನ್ನಡಿಗರ ಆಶಯ .
ವರದಿ- ಸುಧಾ ಶಶಿಕಾಂತ್