ಮಸ್ಕತ್ ನಿಂದ ಊರಿಗೆ ಹೊರಟ ಪತಿ ಮನೆಗೆ ಬಾರದೆ ನಾಪತ್ತೆ! – ದೂರು ದಾಖಲು

Spread the love

ಮಸ್ಕತ್ ನಿಂದ ಊರಿಗೆ ಹೊರಟ ಪತಿ ಮನೆಗೆ ಬಾರದೆ ನಾಪತ್ತೆ! – ದೂರು ದಾಖಲು

ಉಡುಪಿ: ಮಸ್ಕತ್ ನಿಂದ ಊರಿಗೆ ಹೊರಟ ಪತಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಲವೀನಾ ಪಿಂಟೊ ಅವರ ಪತಿ ಫ್ರಾನ್ಸಿಸ್ ರವಿ ಡಿಸೋಜಾ (55) ಅವರು ಕುವೈಟ್ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಆಗಾಗ್ಗೆ ಊರಿಗೆ ಬಂದು ಪತ್ನಿ ಹಾಗೂ ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದಾರೆ.

ಇತ್ತೀಚೆಗೆ ಫ್ರಾನ್ಸಿಸ್ ಅವರಿಗೆ ಒಂದು ತಿಂಗಳ ರಜೆ ಮಂಜೂರಾಗಿದ್ದು ಊರಿಗೆ ಹೋಗುವುದಾಗಿ ಹೇಳಿ ಜನವರಿ 9 ರಂದು ರಾತ್ರಿ 9.20ಕ್ಕೆ ಕುವೈಟ್ ನಿಂದ ಮಸ್ಕತ್ ಗೆ ಹೋಗುವ ಓಮನ್ ಏರ್ ಲೈನ್ಸ್ ನಲ್ಲಿ ಹೊರಟಿದ್ದು ಜನವರಿ 10ರಂದು ಬೆಳಗಿನ ಜಾವ ಲವೀನಾ ಅವರಿಗೆ ಕರೆ ಮಾಡಿ ಮಸ್ಕತ್ ನಿಂದ ದುಬೈಗೆ ಟೀಕೆಟ್ ಮಾಡಿಸಿದ್ದ ವಿಮಾನ ತಪ್ಪಿ ಹೋಗಿದ್ದು ಬೇರೆ ಟಿಕೇಟ್ ಮಾಡಲು ಹೇಳಿರುತ್ತಾರೆ.

ಅದರಂತೆ ಲವೀನಾ ಪಿಂಟೊ ಅವರು ಬೇರೆ ಟಿಕೇಟ್ ಮಾಡಿಸಿ ಫ್ರಾನ್ಸಿಸ್ ರವಿ ಡಿಸೋಜಾರಿಗೆ ಕಳುಹಿಸಿದ್ದು, ಜನವರಿ 11 ರಂದು ಬೆಳಿಗ್ಗೆ ಫ್ರಾನ್ಸಿಸ್ ರವಿ ಅವರು ಮಸ್ಕತ್ ನಿಂದ ಹೊರಟಿರುವುದಾಗಿ ಲವೀನಾರಿಗೆ ಮೆಸ್ಸೆಜ್ ಮಾಡಿ ತಿಳಿಸಿದ್ದು ಅಂದು 6.35ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಬೇಕಾಗಿದ್ದು ಫ್ರಾನ್ಸಿಸ್ ಅವರು ಮನೆಗೆ ಹೋಗದೆ ನಾಪತ್ತೆಯಾಗಿರುತ್ತಾರೆ.

ಫ್ರಾನ್ಸಿಸ್ ರವಿ ಡಿಸೋಜಾ ರವರು ಮಸ್ಕತ್ ನಿಂದ ಹೊರಟು ಬಳಿಕ ಯಾವುದೇ ಮಾಹಿತಿ ದೊರಕದೇ ಇದ್ದುದರಿಂದ ಅವರ ಪತ್ನಿ ಲವೀನಾ ಜನವರಿ 28ರಂದು ಊರಿಗೆ ಬಂದಿದ್ದು ತನ್ನ ಗಂಡನಿಗಾಗಿ ಹುಡುಕಾಡಿದ್ದು ಪತ್ತೆಯಾಗದ ಕಾರಣ ದೂರು ನೀಡಿರುತ್ತಾರೆ .

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love