ಮಹಾನಗರ ಪಾಲಿಕೆಯಿಂದ ಅನಧಿಕೃತ ಗೂಡಂಗಡಿಗಳ ತೆರವು
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ , ರಾವ್ ಆ್ಯಂಡ್ ರಾವ್ ಸರ್ಕಲ್, ಹಾಗೂ ಮಿಷನ್ ಸ್ಟ್ರೀಟ್ ನ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಮಹಾನಗರ ಪಾಲಿಕೆ ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಬುಧವಾರ ನಡೆಯಿತು.
ಬುಧವಾರ ಬೆಳಿಗ್ಗೆ ಕಂದಾಯ ಅಧಿಕಾರಿಗಳು, ಪಾಲಿಕೆಯ ಆರೋಗ್ಯ ಇಲಾಖೆ ಸಿಬಂದಿಗಳು ಜಂಟಿಯಾಗಿ ಕಾರ್ಯಚಾರಣೆ ನಡೆಸಿದ್ದು, ಅನಧಿಕೃತ ಗೂಡಂಗಡಿಗಳನ್ನು ಸ್ಥಳದಿಂದ ತೆರವುಗೊಳಿಸಲಾಯಿತು.
ಮಾಧ್ಯಮದೊಂದಿಗೆ ಮಾತನಾಡಿದ ನಾಗರಿಕರು ಸ್ಟೇಟ್ ಬ್ಯಾಂಕ್ ಹಂಪನಕಟ್ಟ ಪ್ರದೇಶದಲ್ಲಿ ಅನಧೀಕೃತ ಗೂಡಂಗಡಿಗಳು ಫುಟ್ ಪಾತ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕರು ಪರದಾಡಬೇಕಾಗಿದೆ. ಪಾಲಿಕೆ ಯಕ್ಷಗಾನ ಮೈದಾನದಲ್ಲಿ ಸ್ಥಳಾವಕಾಶ ನೀಡಿದರೂ ಕೂಡ ರಸ್ತೆಯ ಬದಿಯಲ್ಲಿ ಪಾದಾಚಾರಿಗಳಿಗೆ ತೊಂದರೆಯಾಗುವಂತೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ದೂರಿದರು.
ಕಾರ್ಯಚಾರಣೆಯ ವೇಳೆ ಕಂದಾಯ ಅಧಿಕಾರಿ ಪ್ರವೀಣ್ ಚಂದ್ರ ಕರ್ಕೆರಾ, ಶಿವರಾಜ್, ದಿನೇಶ್ ರಾಜು, ರವೀಂದ್ರ ಹಾಗೂ ಪೋಲಿಸ್ ಅಧಿಕಾರಿಗಳು ಸಹಕರಿಸಿದರು.