ಮಹಾನಗರ ಪಾಲಿಕೆ: ನೀರು ಪೂರೈಕೆ ದಿನ ನಿಗದಿ
ಮ0ಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಬಳಕೆದಾರರ ಗಮನಕ್ಕೆ ಪ್ರಸ್ತುತ ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಸ್ಥಗಿತಗೊಂಡಿದ್ದು, ಹಾಲಿ ತುಂಬೆ ಮತ್ತು ಎ.ಎಂ.ಆರ್ ಡ್ಯಾಂ ಗಳಲ್ಲಿ ಸಂಗ್ರಹವಾಗುವ ನೀರನ್ನು ಮುಂದಿನ ಮೇ ಅಂತ್ಯದವರೆಗೆ ಅಂದರೆ ಮಳೆ ಬರುವ ತನಕ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 20 ರಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಳಕೆದಾರರಿಗೆ ವಾರದ ದಿನಗಳಲ್ಲಿ ವಿತರಣೆ ಮಾಡಲಾಗುವುದು.
ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ ಸಂಜೆ 6 ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು. ಮಂಗಳವಾರ ಸಂಜೆ 6 ರಿಂದ ಗುರುವಾರ ಸಂಜೆ 6 ಗಂಟೆಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಪ್ರದೇಶಗಳ ಎಲ್ಲಾ ಬಳಕೆದಾರರಿಗೆ ಪೂರೈಕೆಯಾಗಲಿದೆ.
ಗುರುವಾರ ಸಂಜೆ6 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗುವುದು, ಶನಿವಾರ ಬೆಳಿಗ್ಗೆ 6 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಪಾಲಿಕೆ ವ್ಯಾಪ್ತಿಯಲ್ಲಿನ ವಿವಿಧ ಪ್ರದೇಶಗಳ ಎಲ್ಲಾ ಬಳಕೆದಾರರಿಗೆ ಪೂರೈಕೆಯಾಗುವಂತೆ ಕ್ರಮವಹಿಸಲಾಗುವುದು.
ಸಾರ್ವಜನಿಕರ ಹಿತದೃಷ್ಟಿಯಿಂದ ಬೇಸಿಗೆ ಸಮಯದಲ್ಲಿ ಯಾವುದೇ ರೀತಿಯ ಕುಡಿಯುವ ನೀರಿನ ಕೊರತೆ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಮುಂದಿನ ಮೇ ಅಂತ್ಯದವರೆಗೆ ಈ ಮೇಲಿನ ರೀತಿಯಲ್ಲಿ ಪೂರೈಕೆ ಮಾಡಲು ಕ್ರಮವಹಿಸಲಾಗಿದೆ. ಸಾರ್ವಜನಿಕರು ಸಹಕರಿಸಲು ಮಂಗಳುರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.