ಮಹಾರಾಷ್ಟ್ರದಿಂದ ಆಗಮಿಸುವ ಜಿಲ್ಲೆಯ ನಾಗರೀಕರಿಗೆ ಉಡುಪಿ ಜಿಲ್ಲಾಡಳಿತದಿಂದ ಬೆಳಗಾವಿಯ ಗಡಿಯಲ್ಲಿ ಸಹಾಯ ಕೇಂದ್ರ ಆರಂಭ

Spread the love

ಮಹಾರಾಷ್ಟ್ರದಿಂದ ಆಗಮಿಸುವ ಜಿಲ್ಲೆಯ ನಾಗರೀಕರಿಗೆ ಉಡುಪಿ ಜಿಲ್ಲಾಡಳಿತದಿಂದ ಬೆಳಗಾವಿಯ ಗಡಿಯಲ್ಲಿ ಸಹಾಯ ಕೇಂದ್ರ ಆರಂಭ

ಉಡುಪಿ: ಮಹಾರಾಷ್ಟçದಿಂದ ಉಡುಪಿ ಜಿಲ್ಲೆಗೆ ಬರುವ ಸಾರ್ವಜನಿಕರಿಗೆ , ರಾಜ್ಯಕ್ಕೆ ಪ್ರವೇಶಿಸಲು ಅಗತ್ಯ ನೆರವು ನೀಡುವ ಉದ್ದೇಶದಿಂದ , ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಸೂಚನೆಯಂತೆ ಉಡುಪಿಯಿಂದ ತೆರಳಿರುವ ಅಧಿಕಾರಿಗಳ ತಂಡ, ಬೆಳಗಾವಿಯ ಗಡಿಭಾಗವಾದ ನಿಪ್ಪಾಣಿಯಲ್ಲಿ ತೆರದಿರುವ ಸಹಾಯಕೇಂದ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಮಹಾರಾಷ್ಟದಿಂದ ಬರುವ ಜಿಲ್ಲೆಯ ನಾಗರೀಕರ , ಉಡುಪಿ ಜಿಲ್ಲೆಯಲ್ಲಿನ ವಿಳಾಸದ ಕುರಿತು ಪರಿಶೀಲನೆ ನಡೆಸಿ ಅದನ್ನು ದೃಢೀಕರಿಸಿ, ಅವರು ರಾಜ್ಯ ಪ್ರವೇಶಿಸಲು ಸಹಾಯ ಮಾಡುತ್ತಿದ್ದು ಮಾತ್ರವಲ್ಲದೇ , ಉಡುಪಿ ಜಿಲ್ಲೆಗೆ ಆಗಮಿಸಿದ ನಂತರದ ಇಲ್ಲಿನ ಕ್ವಾರಂಟೈನ್ ಕ್ರಮಗಳು , ಜಿಲ್ಲಾಡಳಿತದಿಂದ ಒದಗಿಸುವ ಸೌಲಭ್ಯಗಳು, ಮತ್ತಿತರ ಅಗತ್ಯ ಮಾಹಿತಿಯನ್ನು ನೀಡುವುದರ ಮೂಲಕ , ಜಿಲ್ಲೆಗೆ ಬರುವ ನಾಗರೀಕರಲ್ಲಿನ ಅನಗತ್ಯ ಆತಂಕವನ್ನು ದೂರ ಮಾಡಿ , ನಿರಾಳವಾಗಿ ಜಿಲ್ಲೆಗೆ ತಲುಪಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದು, ಜಿಲ್ಲಾಡಳಿತಕ್ಕೆ ಸಹ ಮಹಾರಾಷ್ಟçದಿಂದ ಆಗಮಿಸುತ್ತಿರುವ ಸಾರ್ವಜನಿಕರ ಸಂಪೂರ್ಣ ವಿವರಗಳನ್ನು ಅವರು ಜಿಲ್ಲೆಗ ತಲುಪುವ ಮೊದಲೇ ತಲುಪಿಸಲಾಗುತ್ತಿದೆ.

ಈ ತಂಡ ಕಾರ್ಯ ನಿರ್ವಹಿಸುವ ಮೊದಲು,ರಾಜ್ಯದ ಗಡಿ ಪ್ರವೇಶಿಸಲು ಅನೇಕ ಸಮಸ್ಯೆ ಎದುರಿಸುತ್ತಿದ್ದ ಜಿಲ್ಲೆಯ ಸಾರ್ವಜನಿಕರು, ಈಗ ಸುಗಮವಾಗಿ ಆಗಮಿಸುತ್ತಿದ್ದು, ಪ್ರಸ್ತುತ ಪ್ರತಿನಿತ್ಯ ಸರಾಸರಿ 600 ಮಂದಿ ಉಡುಪಿ ಜಿಲ್ಲೆಯ ನಾಗರೀಕರು ಮುಂಬೈ ಸೇರಿದಂತೆ ಮಹಾರಾಷ್ಟçದ ವಿವಿಧ ಜಿಲ್ಲೆಗಳಿಂದ ನಿಪ್ಪಾಣಿಯ ಗಡಿಗೆ ಆಗಮಿಸುತ್ತಿದ್ದು, ಇವರಿಗೆ ಕರ್ನಾಟಕ ರಾಜ್ಯ ಪ್ರವೇಶಿಸಿ, ಉಡುಪಿ ಜಿಲ್ಲೆಗೆ ಆಗಮಿಸಲು ಈ ತಂಡ ಅಗತ್ಯ ನೆರವು ನೀಡಲಾಗುತ್ತಿದೆ.

ಈ ತಂಡದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಹಾಯಕರಾಗಿ ಜಿಲ್ಲಾ ನಗರಾಭಿವೃಧ್ದಿ ಕೋಶದ ಕಾಶೀನಾಥ್ ಕಾರ್ಯ ನಿರ್ವಹಿಸುತ್ತಿದ್ದಾರೆ.


Spread the love