ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಧಿಕಾರ ಯಾತ್ರೆ ರಾಜಕೀಯ ಸ್ಥಾನಮಾನ ಕುರಿತ ಮೀಸಲಾತಿಗೆ ಆಗ್ರಹ
ಮಂಗಳೂರು: ರಾಜಕೀಯದಲ್ಲಿ ಮಹಿಳಾ ಸ್ಥಾನಮಾನದ ಮೀಸಲಾತಿಗೆ ಆಗ್ರಹಿಸಿ ದಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಮಹಿಳಾ ಅಧಿಕಾರ ಯಾತ್ರೆ ಮಂಗಳೂರಿನಲ್ಲಿ ನಡೆಯಿತು.
ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಿಂದ ಮಹಿಳಾ ಅಧಿಕಾರ ಯಾತ್ರೆ ಆರಂಭಿಸಿ ಮಲ್ಲಿಕಟ್ಟೆ ಕದ್ರಿ ಮೈದಾನದವರೆಗೆ ಮಾನವ ಸರಪಳಿ ನಿರ್ಮಿಸಲಾಯಿತು.ಕಾರ್ಯಕ್ರಮಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಪ್ಸರಾ ರೆಡ್ಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಮಹಿಳೆಯರು ಕೇವಲ 33% ಮೀಸಲಾತಿಗೆ ಹೋರಾಟ ನಡೆಸದೆ 50% ಮೀಸಲಾತಿಯನ್ನು ಕಾಂಗ್ರೆಸ್ ನೀಡಲಿದೆ. ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರು ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಲು ಒಪ್ಪಿಕೊಂಡಿದ್ದು, ಕೇವಲ ಮೀಸಲಾತಿಗಾಗಿ ಕಾಯದೆ ಬೂತ್ ಮಟ್ಟದಿಂದ ಕಾರ್ಯಚಾರಣೆ ಮಾಡಿ ಪಕ್ಷ ಸಂಘಟಿಸುವ ಕೆಲಸ ಮಾಡಿ. ಈ ಮೂಲಕ ರಾಹುಲ್ ಗಾಂಧಿಯನ್ನು ದೇಶದ ಪ್ರಧಾನಿಯನ್ನಾಗಿಸಲು ಶ್ರಮ ವಹಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ಅಪ್ಸರಾ ರೆಡ್ಡಿ, ಒರ್ವ ಮಂಗಳಮುಖಿಯಾಗಿ ಸಮಾಜದಲ್ಲಿ ಹಲವಾರು ಸಮಸ್ಯೆಗಳಿದ್ದು, ನಾನು ಕೂಡ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದೇನೆ. ರಾಹುಲ್ ಗಾಂಧಿಯನ್ನು ನಾನು ಭೇಟಿಯಾದ ವೇಳೆ ಲಿಂಗ ಸಮಸ್ಯೆ ಒಂದು ಸಮಸ್ಯೆಯಲ್ಲ ಬದಲಾಗಿ ಕಲೆ ಮತ್ತು ಪ್ರತಿಭೆಗಳು ಮುಖ್ಯವಾಗಿದೆ. ದೇಶದ ಜನತೆಗೆ ಸೇವೆ ನೀಡಲು ಸ್ಪಷ್ಟ ಗುರಿ ಅಗತ್ಯವಾಗಿದೆ. ಸಮಾಜ ಸೇವೆಗೆ ಯಾವುದೇ ಲಿಂಗದ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಾನು ಬಂದ ಬಳಿಕ ದೇಶದ ವಿವಿಧ ಭಾಗಕ್ಕೆ ಭೇಟಿ ನೀಡಿ ಜನರೊಂದಿಗೆ ಬೆರೆಯುವ ಅವಕಾಶ ಲಭಿಸಿದೆ ಎಂದರು.
ನರೇಂದ್ರ ಮೋದಿಯ ಬೇಟಿ ಬಚಾವೊ ಬೇಟಿ ಪಡಾವೋ ಯೋಜನೆಯನ್ನು ಪರಿಚಯಿಸಿದ್ದಾರೆ. ಮಹಿಳೆಯರ ಧ್ವನಿ ಈ ದೇಶಕ್ಕೆ ಮುಖ್ಯವಾಗಿದೆ ಅದಕ್ಕಾಗಿ ಅವರುಗಳಿಗೆ ವಿದ್ಯಾಭ್ಯಾಸ ಅತಿಅಗತ್ಯ. ಆದರೆ ಪ್ರತಿ ಮಗುವಿಗೆ ಮೀಸಲಿಟ್ಟಿರುವ ಅನುದಾನ ಕೇವಲ 5 ಪೈಸೆ, ಇದು ಎಲ್ಲಿಗೂ ಕೂಡ ಸಾಲಲಾರದು. ಮೋದಿ ತನ್ನ ವೈಯುಕ್ತಿಕ ವರ್ಚಸ್ಸಿಗಾಗಿ 56% ಹಣವನ್ನು ವ್ಯಯಿಸುತ್ತಾರೆ ಅಂತಹವರ ಅಗತ್ಯ ನಮಗೆ ಇದೆಯಾ? ನರೇಂದ್ರ ಮೋದಿಯನ್ನು ತನ್ನ ಹುದ್ದೆಯಿಂದ ಕೆಳಗಿಳಿಸಬೇಕಾದ ಸಮಯ ಬಂದಿದ್ದು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿಸಬೇಕು ಎಂದರು.