Home Mangalorean News Kannada News ಮಹಿಳಾ ಹೈಜಂಪ್‍ನಲ್ಲಿ ರಾಜ್ಯದ ಸಹನಾಗೆ ಚಿನ್ನ

ಮಹಿಳಾ ಹೈಜಂಪ್‍ನಲ್ಲಿ ರಾಜ್ಯದ ಸಹನಾಗೆ ಚಿನ್ನ

Spread the love

ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ಫೆಡರೇಷನ್ ಕಪ್  ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2015ರ ಮಹಿಳೆಯರ ಹೈ ಜಂಪ್‍ನಲ್ಲಿ ಕರ್ನಾಟಕದ ಸಹನಾ ಕುಮಾರಿ  ಚಿನ್ನ ಪಡೆದಿದ್ದಾರೆ.

ಮೊದಲ ಸ್ಥಾನದಲ್ಲಿ ಸಹನಾ ಕುಮಾರಿ (1.76. ಮೀ) ಚಿನ್ನ, ಪಶ್ವಿಮ ಬಂಗಾಳದ ಮಲ್ಲಿಕಾ ಮೊಂಡಲ್ (1.73 ಮೀ) ಬೆಳ್ಳಿ, ಕೇರಳದ ಸ್ಟೀನಿ ಮೈಕೆಲ್ (1.70 ಮೀ) ಕಂಚು ಗೆದ್ದಿದ್ದಾರೆ.  1.76 ಮೀ. ಎತ್ತರವನ್ನು ಸುಲಭವಾಗಿ ನೆಗೆದ ಸಹನಾ ಕುಮಾರಿ, ಬಳಿಕ 1.80 ಮೀ.ಗೆ ಪ್ರಯತ್ನ ಮಾಡಿದರೂ ಜಯ ಗಳಿಸಲಿಲ್ಲ. ಇದರಿಂದಾಗಿ ಮುಂದೆ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಹಾಗೂ ನಂತರದ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಈ ಕುರಿತು ಸುದ್ದಿಗಾರರೊಂದಿಗೆ ಸಹನಾ ಮಾತನಾಡಿ, ನಾನು ತರಬೇತುದಾರರಿಲ್ಲದೆ ಇಷ್ಟು ಪ್ರಯತ್ನಿಸಲು ಸಾಧ್ಯವಾಗಿದೆ.  ಉತ್ತಮ ತರಬೇತಿದಾರರು ದೊರೆತರೆ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯವೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.


Spread the love

Exit mobile version