ಮಹಿಳೆಯರಿಗೆ, ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಬೆಂದೂರ್ ವೆಲ್ನಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 29 ರಂದು, ಸಂಜೆ 6: 20 ರ ಸುಮಾರಿಗೆ, ಬೆಂದೂರ್ ವೆಲ್ 3 ನೇ ಕ್ರಾಸ್ ರಸ್ತೆಯಲ್ಲಿ ಹಾದುಹೋಗುವ ಯುವತಿಯರು ಮತ್ತು ಮಹಿಳೆಯರ ಮುಂದೆ ಒಬ್ಬ ವ್ಯಕ್ತಿಯು ತನ್ನ ಖಾಸಗಿ ಭಾಗಗಳನ್ನು ಪ್ರದರ್ಶನ ಮಾಡುತ್ತಿದ್ದಾನೆ ಎಂದು ನಿವಾಸಿಯೊಬ್ಬರು ಟೀಮ್ ಮ್ಯಾಂಗಲೋರಿಯನ್ ಪ್ರತಿನಿಧಿಗೆ ತಿಳಿಸಿದ್ದರು. ದೂರಿನಂತೆ ಅಲ್ಲಿ ತೆರಳಿದಾಗ ಆ ವ್ಯಕ್ತಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಕಂಡುಬಂದಿದ್ದು ಆದರೆ ವ್ಯಕ್ತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದನು.
ಒಂದು ಗಂಟೆಯ ನಂತರ, ಅದೇ ಮಹಿಳೆ ಕರೆ ಮಾಡಿ, ಪುರುಷ ಮತ್ತೆ ಮಹಿಳೆಯರು ಮತ್ತು ಹುಡುಗಿಯರನ್ನು ದಿಟ್ಟಿಸುತ್ತಾ ತಿರುಗಾಡುತ್ತಿದ್ದಾನೆ ಎಂದು ಹೇಳಿದರು. ಸೇಂಟ್ ಥೆರೆಸಾ ಸ್ಕೂಲ್ ಬೆಂದೂರು ಬಳಿ ಕರ್ತವ್ಯದಲ್ಲಿದ್ದ ಕದ್ರಿಯ ಮಹಿಳಾ ಪೊಲೀಸರೊಂದಿಗೆ ಮ್ಯಾಂಗಲೋರಿಯನ್ ತಂಡ ಆ ವ್ಯಕ್ತಿಯನ್ನು ಹಿಂಬಾಲಿಸಿತು. ಮಹಿಳಾ ಪೊಲೀಸರು ಸ್ಥಳಕ್ಕೆ ತಲುಪಿ ಘಟನೆ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೂರ್ವ ಪೊಲೀಸರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು ಅವರ ವಶಕ್ಕೆ ತೆಗೆದುಕೊಂಡರು.
ಮಂಗಳೂರಿಯನ್ ಡಾಟ್ ಕಾಮ್ ಜೊತೆ ಮಾತನಾಡಿದ ಸ್ಥಳೀಯರಲ್ಲೊಬ್ಬರಾದ ಸುರೇಂದ್ರ , “ನಾನು ಈ ವ್ಯಕ್ತಿಯನ್ನು ಕಳೆದ ಮೂರು ವರ್ಷಗಳಿಂದ ಈ ಪ್ರದೇಶದಲ್ಲಿ ಚಲಿಸುತ್ತಿರುವುದನ್ನು ನೋಡುತ್ತಿದ್ದೇನೆ ಮತ್ತು ಹುಡುಗಿಯರು ಮತ್ತು ಮಹಿಳೆಯರಿಗೆ ತನ್ನ ಖಾಸಗಿ ಭಾಗಗಳನ್ನು ಪ್ರದರ್ಶಿಸುವ ಮೂಲಕ ಕಿರುಕುಳ ನೀಡುತ್ತಿದ್ದ. ಹಲವಾರು ಬಾರಿ ಎಚ್ಚರಿಕೆ ನೀಡಿದರೂ, ಅವನು ತನ್ನ ಅಭ್ಯಾಸವನ್ನು ಮುಂದುವರಿಸಿದ್ದನು ಎಂದರು. ”
ಇನ್ನೊಬ್ಬ ವ್ಯಕ್ತಿ ಮಾತನಾಡಿ ನವೆಂಬರ್ 27 ಸಂಜೆ, ಕೆಲವು ಹುಡುಗಿಯರು ಎಸ್ಸೆಲ್ ವಿಲ್ಕಾನ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಆ ವ್ಯಕ್ತಿ ಅವರಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದೆ . ಹುಡುಗಿಯರು ಸಹಾಯಕ್ಕಾಗಿ ಕಿರುಚುತ್ತಿದ್ದರು ಮತ್ತು ಸಾರ್ವಜನಿಕರು ಒಟ್ಟುಗೂಡಿದರು ಮತ್ತು ಅವನ ಮೇಲೆ ಹಲ್ಲೆ ಕೂಡ ನಡೆಸಿದ್ದು, ಬೆಂದೂರ್ ವೆಲ್ ಪ್ರದೇಶದ ಹೆಚ್ಚಿನ ಜನರು ಈ ಮನುಷ್ಯನಿಂದ ತೊಂದರೆ ಅನುಭವಿಸಿದ್ದಾರೆ ಆದರೆ ದೂರು ನೀಡಲು ಹಿಂಜರಿಯುತ್ತಾರೆ ಎಂದು ಹೇಳಿದರು.