ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತರಗಬೇಕು – ಸಿವಿಲ್ ನ್ಯಾಯಾಧೀಶೆ ಶಿಲ್ಪ ಎಜಿ  

Spread the love

ಮಹಿಳೆಯರು ಹಕ್ಕುಗಳ ಬಗ್ಗೆ ಜಾಗೃತರಗಬೇಕು – ಸಿವಿಲ್ ನ್ಯಾಯಾಧೀಶೆ ಶಿಲ್ಪ ಎಜಿ  

ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಮಂಗಳೂರು ಮತ್ತು ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ, ಇವರ ಜಂಟೀ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ದ.ಕ ಜಿಲ್ಲೆ ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪ ಎಜಿ, ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ಸವಿವರವಾಗಿ ವಿವರಿಸುತ್ತ, ಮನೆಗೆ ಮಹಿಳೆ ಜೀವನಾಧಾರ. ಇಂದು ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರು ಸಂಘಟಿತರಾಗಿ ತಮಗೆ ನೀಡಲಾದ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಿವಿಲ್ ನ್ಯಾಯಾಧೀಶೆ ಹಾಗೂ ಮಂಗಳೂರಿನ 8ನೇ ನ್ಯಾಯಿಕ ದಂಡಾಧಿಕಾರಿ, ಶಿಲ್ಪ ಶ್ರೀ ಹಾಗೂ ಎಸ್‍ಡಿಎಂ ಕಾನೂನು ಮಹಾವಿದ್ಯಾಲ ಸಹಾಯಕ ಪ್ರಾಚಾರ್ಯ ಸುಬ್ಬಲಕ್ಷ್ಮೀ ಇವರು ಮಹಿಳೆಯರಿಗೆ ಆಸ್ತಿಹಕ್ಕು ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಇತರ ಕಾಯ್ದೆಗಳ ಬಗ್ಗೆ ಕಾನೂನಿನ ಅರಿವು ನೀಡಿದರು.

ಕಾಲೇಜಿನ ಪ್ರಾಚಾರ್ಯ ಭಗಿನಿ ಮರಿಯಾ ಶೋಭಾ ಅಧ್ಯಕ್ಷತೆ ವಹಿಸಿದರು.


Spread the love