ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಕೋಟ ಠಾಣೆಯ ಪಿಎಸ್ಐ ಸುಧಾ ಪ್ರಭು ವಜಾಗೊಳಿಸುವಂತೆ ಗೃಹ ಸಚಿವರಿಗೆ ಮನವಿ

Spread the love

ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಕೋಟ ಠಾಣೆಯ ಪಿಎಸ್ಐ ಸುಧಾ ಪ್ರಭು ವಜಾಗೊಳಿಸುವಂತೆ ಗೃಹ ಸಚಿವರಿಗೆ ಮನವಿ

ಉಡುಪಿ: ಅಮಾಯಕ ಬಡ ಕೂಲಿ ಕಾರ್ಮಿಕ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಕೋಟ ಠಾಣೆಯ ಕ್ರೈಮ್ ಪಿಎಸ್ ಐ ಸುಧಾ ಪ್ರಭು ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಗೃಹ ಸಚಿವ ಡಾ| ಜಿ ಪರಮೇಶ್ವರ್ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬೇಳೂರು ಗ್ರಾಮದ ನೂಜಿ ಎಂಬಲ್ಲಿಯ ಉದ್ಯಮಿ ಕಿರಣ್ ಶೆಟ್ಟಿ ಎಂಬವರ ಮನೆಯಲ್ಲಿ ಇಟ್ಟಿದ್ದ ಇಟ್ಟಿದ್ದ ಚಿನ್ನದ ಬಳೆ ಕಾಣೆಯಾಗಿರುವ ಬಗ್ಗೆ ದೂರಿಕೊಂಡಿದ್ದರು

ಸದ್ರಿ ಕಿರಣ್ ಶೆಟ್ಟಿಯವರಿಂದ ಪ್ರೇರೇಪಿತರಾದ ಕೋಟ ಆರಕ್ಷಕ ಉಪ ನಿರೀಕ್ಷಕಿ ಸುಧಾ ಪ್ರಭುರವರು ಕಿರಣ್ ಶೆಟ್ಟಿಯವರ ಮನೆಯಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸಿದ್ದ ಬಡ, ಅಮಾಯಕ ಕೂಲಿ ಕಾರ್ಮಿಕ ಮಹಿಳೆಯರಾದ ಸುಜಾತ ಕುಲಾಲ ಮತ್ತು ಆಶಾ ಎಂಬುವರನ್ನು ಠಾಣೆಗೆ ಕರೆಸಿಕೊಂಡು, ಠಾಣೆಯ ಮೊದಲ ಮಹಡಿಯಲ್ಲಿ ಸುಜಾತ ಕುಲಾಲ ಎಂಬ ಮಹಿಳೆಗೆ ದೈಹಿಕ ಹಲ್ಲೆ ನಡೆಸಿರುತ್ತಾರೆ. ಈಕೆಯನ್ನು ಬೂಟು ಗಾಲಿನಿಂದ ತುಳಿದು, ಹೊಟ್ಟೆಗೆ ಮತ್ತು ಕೆನ್ನೆಗೆ ಹೊಡೆದು, ನೆಲದ ಮೇಲೆ ಮಲಗಿಸಿ ಕಾಲನ್ನು ಎತ್ತಿ, ಎರಡೂ ಪಾದಗಳಿಗೆ ಲಾಟಿಯಿಂದ ವಿಪರೀತವಾಗಿ ಹಲ್ಲೆ ನಡೆಸಿ, ಚಿನ್ನವನ್ನು ಕದ್ದವರು ತಾವೇ ಎಂದು ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿರುತ್ತಾರೆ. ಆಶಾರವರಿಗೂ ಕೂಡಾ ಲಾಟಿಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಅಮಾಯಕ ಮಹಿಳೆಯರು ತಮಗೂ ಚಿನ್ನ ನಾಪತ್ತೆ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಎಷ್ಟೇ ಗೋಗರೆದರೂ ಸುಧಾ ಪ್ರಭುರವರು ಕೇಳದೆ ಸಂತ್ರಸ್ತ ಮಹಿಳೆಯರನ್ನು ಉದ್ದೇಶಿಸಿ, ಕಳ್ಳತನವನ್ನು ಒಪ್ಪಿಕೊಳ್ಳದೇ ಇದ್ದಲ್ಲಿ, ನಿಮ್ಮ ಗುಪ್ತಾಂಗಳಿಗೆ ಪೆಟ್ರೋಲ್ ಮತ್ತು ಕಾರದಪಡಿ ಎರಚಿ ಬಾಯಿ ಬಿಡಿಸುವುದಾಗಿ ಬೆದರಿಸಿರುತ್ತಾರೆ. ಸಂತ್ರಸ್ತ ಮಹಿಳೆಯರು ಪೊಲೀಸ್ ದೌರ್ಜನ್ಯದಿಂದ ನಿತ್ರಾಣರಾದ ಮೇಲೆ ದೂರುದಾರ ಕಿರಣ್ ಶೆಟ್ಟಿಯವರ ಅಣತಿಯಂತೆ ಅವರನ್ನು ಅವರ ಮನೆಗೆ ಕಳುಹಿಸಿಕೊಟ್ಟಿರುತ್ತಾರೆ.

ಪೊಲೀಸ್ ದೌರ್ಜನ್ಯದಿಂದ ತೀವ್ರ ಅಸ್ವಸ್ಥಗೊಂಡ ಸುಜಾತ ಕುಲಾಲ ಮತ್ತು ಆಸ್ತಾ ಉಡುಪಿಯ ಅಜ್ಜರಕಾಡು ಸರಕಾರಿ ಪಡೆದುಕೊಂಡಿರುತ್ತಾರೆ. ಸಮಿತಿಗೆ ಜಿಲ್ಲಾಸ್ಪತ್ರೆಯಲ್ಲಿ, ಒಳರರೋಗಿಗಳಾಗಿ ಚಿಕಿತ್ಸೆ ಈ ಬಗ್ಗೆ ದೂರು ಬಂದ ಮೇರೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತ ಮಹಿಳೆಯರ ಹೇಳಿಕೆ ಪಡೆದು, ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಲಾಗಿರುತ್ತದೆ.

ಸುಧಾ ಪ್ರಭುರವರು ಕೋಟ ಆರಕ್ಷಕ ಠಾಣೆಯಲ್ಲಿ ಅಲ್ಲದೇ ಅವರು ಕರ್ತವ್ಯ ನಿರ್ವಹಿಸಿದ ಹಿಂದಿನ ಠಾಣೆಗಳಲ್ಲೂ ಸಹಾ ಇದೇ ರೀತಿಯ ಪೊಲೀಸ್ ದರ್ಪವನ್ನು ತೋರಿಸಿರುತ್ತಾರೆ. ನಮ್ಮ ಸಮಿತಿಯು ಈ ಬಗ್ಗೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿಯೊಂದನ್ನು ಸಲ್ಲಿಸಿ, ತಪ್ಪಿತಸ್ಥ ಸುಧಾ ಪ್ರಭುರವರ ವಿರುದ್ಧ ಇಲಾಖಾ ಕ್ರಮ ಜರುಗಿಸುವಂತೆ ಕೋರಿಕೊಂಡಿರುತ್ತೇವೆ. ಆದರೆ ಇದುವರೆಗೆ ಈ ಪೊಲೀಸ್ ಅಧಿಕಾರಿಯ ಮೇಲೆ ಯಾವುದೇ ಕ್ರಮ ಆಗಿರುವುದಿಲ್ಲ, ದೂರು ನೀಡಿದ ನಮ್ಮ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ಇದೇ ಪ್ರಥಮ ಎಂಬಂತೆ ಪೋಲೀಸರು ಪೊಲೀಸ್ ನೋಟೀಸ್ ನೀಡಿ ನಮ್ಮನ್ನು ಬೆದರಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆದ್ದರಿಂದ ತಾವು ಈ ಕೂಡಲೇ ಸೂಕ್ತ ಕ್ರಮವಹಿಸಿ, ತಪ್ಪಿತಸ್ಥ ಪೋಲೀಸ್ ಉಪ ನಿರೀಕ್ಷಕರಾದ ಸುಧಾ ಪ್ರಭುರವರನ್ನು ಈ ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಸಮಿತಿಯು ಜಿಲ್ಲೆಯಲ್ಲಿ ಇನ್ನೂ ಉಗ್ರ ರೀತಿಯ ಚಳುವಳಿಯನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಮನವಿಯನ್ನು ಸ್ವೀಕರಿಸಿದ ಗೃಹಸಚಿವರು ಆದಷ್ಟು ಬೇಗ ಘಟನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಸುಂದರ ಮಾಸ್ತರ್, ಮಂಜುನಾಥ್ ಗಿಳಿಯಾರ್, ವಾಸುದೇವ ಮುದೂರು ಹಾಗೂ ಇತರರು ಉಪಸ್ಥಿತರಿದ್ದರು.


Spread the love