ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಗೊಂಡ ಸೊಮೇಶ್ವರ ಪರಿಸರ ಸೀಲ್ ಡೌನ್
ಮಂಗಳೂರು: ಉಳ್ಳಾಲ ಸೋಮೇಶ್ವರ ಪ್ರದೇಶ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಸೊಮೇಶ್ವರ ಪರಿಸರದಲ್ಲಿ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಸೊಮೇಶ್ವರ ಪೂರ್ವದ ಅಭಿ ಜನರಲ್ ಸ್ಟೋರ್, ಪಶ್ಚಿಮದ ಪಿಲಾರ್ ಮಸೀದಿ ಪ್ರದೇಶ, ಉತ್ತರದ ಪಂಜದಾಯ ದೈವಸ್ಥಾನ ಹಾಗೂ ದಕ್ಷಿಣದ ನಿತ್ಯಾಧರ ಚರ್ಚ್ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ. ಈ ಭಾಗದ 95 ಮನೆಗಳು, 10ಕಚೇರಿಗಳು ಸಂಪೂರ್ಣ ಕಂಟೈನ್ಮೆಂಟ್ ವ್ಯಾಪ್ತಿಗೊಳಪಡಿಸಲಾಗಿದೆ. ಇಲ್ಲಿ ಒಟ್ಟು 430 ಮಂದಿ ವಾಸವಾಗಿದ್ದಾರೆ.
ಅಲ್ಲಿಂದ 5 ಕಿಮಿ ಸುತ್ತಮುತ್ತಲಿನ ಪೂರ್ವದ ಉಚ್ಚಿಲ ಸೇತುವೆ, ಪಶ್ಚಿಮದ ಏಕ್ಕೂರು ಬಸ್ ನಿಲ್ದಾಣ, ಸಮುದ್ರ ಪ್ರದೇಶ ಹಾಗ ಕೊಣಾಜೆ ಬಸ್ ನಿಲ್ದಾಣ ವ್ಯಾಪ್ತಿಯ ಪ್ರದೇಶಗಳನ್ನು ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಈ ಬಫರ್ ಝೋನ್ ವ್ಯಾಪ್ತಿಗೆ 21390 ಮನೆಗಳು, 5211 ಅಂಗಡಿ ಮತ್ತು ಕಚೇರಿಗಳು, 103098 ಜನಸಂಖ್ಯೆ ಈ ಬಫರ್ ಝೋನ್ ವ್ಯಾಪ್ತಿಗೊಳಪಡುತ್ತಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.