ಮಹಿಳೆ ಕಳೆದುಕೊಂಡಿದ್ದ ವಸ್ತುಗಳನ್ನು ತಲುಪಿಸಲು ಸಹಕರಿಸಿದ ಗೃಹರಕ್ಷಕ ಸಿಬಂದಿ
ಮಂಗಳೂರು: ಮಹಿಳೆಯೋರ್ವರು ಕಳೆದು ಕೊಂಡ ವಸ್ತುಗಳನ್ನು ತಲುಪಿಸುವಲ್ಲಿ ಸಹಕರಿಸಿದ ಗೃಹರಕ್ಷಕ ಸಿಬಂದಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಗರದ ಕೆಎಸ್ ಆರ್ ಟಿ ಸಿ ಪಕ್ಕದ ರಸ್ತೆಯಲ್ಲಿ ಮಹಿಳೆಯೊಬ್ಬರು ಅಟೋ ರಿಕ್ಷಾದಿಂದ ಇಳಿದು ಬಾಡಿಗೆ ಕೊಟ್ಟಾಗ ಅಟೋ ರಿಕ್ಷಾ ತಕ್ಷಣ ವೇ ಹೋಗಿದ್ದು ತಾನು ಖರೀದಿಸಿದ ಸಾಮಾಗ್ರಿಗಳು,ಲಗೇಜ್ ಬ್ಯಾಗ್ ಹಾಗೂ ಮೊಬೈಲ್ ರಿಕ್ಷಾದಲ್ಲಿ ಬಾಕಿಯಾಗಿತ್ತು.
ಆಗ ಆ ಮಹಿಳೆಯು, ಕರ್ತವ್ಯದಲ್ಲಿದ್ದ ಕರ್ನಾಟಕ ರಾಜ್ಯ ಗೃಹ ರಕ್ಷಕ ಸಿಬ್ಬಂದಿ ಅಬ್ದುಲ್ ರವೂಫ್ ರವರ ಗಮನಕ್ಕೆ ತಂದರು.ಅವರು ತಕ್ಷಣ ನಗರ ಸಂಚಾರಿ ಠಾಣೆಗೆ ಮಾಹಿತಿ ನೀಡಿದರು
ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಮಹಿಳೆಯ ಲಗೇಜ್ ಬ್ಯಾಗ್ ನಲ್ಲಿದ್ದ ಮೊಬೈಲ್ ಗೆ ಫೋನ್ ಮಾಡಿದಾಗ ಕೆಲವು ಸಮಯದ ನಂತರ ಫೋನ್ ಎತ್ತಿದ ರಿಕ್ಷಾ ಚಾಲಕರನ್ನು ವಿಚಾರಿಸಿದಾಗ ಮಂಗಳಾದೇವಿ ಸಮೀಪದಲ್ಲಿದ್ದೇನೆ ಕೆಎಸ್ ಆರ್ ಟಿ ಸಿ ವರೆಗೆ ಬರುವುದಾದರೆ ರಿಕ್ಷಾ ಬಾಡಿಗೆ ನೀಡಬೇಕೆಂದು ತಿಳಿಸಿದರು.ಆಗ ಗೃಹ ರಕ್ಷಕ ಸಿಬ್ಬಂದಿ ಬಾಡಿಗೆ ತಾನು ನೀಡುವುದಾಗಿ ತಿಳಿಸಿದರು ಹಾಗೂ ಮಹಿಳೆಗೆ ಕಳೆದು ಕೊಂಡಿದ್ದ ಸಾಮಾಗ್ರಿಗಳು,ಲಗೇಜ್ ಬ್ಯಾಗ್ ಹಾಗೂ ಮೊಬೈಲ್ ನ್ನು ತಲುಪಿಸುವಲ್ಲಿ ಸಹಕರಿಸಿದ್ದಾರೆ.ಇಂತಹ ಒಬ್ಬ ಗೃಹ ರಕ್ಷಕ ಸಿಬ್ಬಂದಿಯ ಬಗ್ಗೆ ಸಾರ್ವಜನಿಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸಿಸಿದ್ದಾರೆ.