ಮಾಂಡ್‍ ಸೊಭಾಣ್ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ

Spread the love

ಮಾಂಡ್‍ ಸೊಭಾಣ್ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾಂಡ್ ಸೊಭಾಣ್ ಸಹಯೋಗದಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ ಸರ್ಟಿಫಿಕೇಟ್ ಕೋರ್ಸ್‍ನ ಸಮಾರೋಪ ಸಮಾರಂಭ  ಕಲಾಂಗಣ್‍ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಶತೆಯನ್ನು ವಹಿಸಿದ ಅಕಾಡೆಮಿಯ ಅಧ್ಯಕ್ಷರಾದ ಆರ್ ಪಿ ನಾಯ್ಕ್ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ ಶಿಬಿರವನ್ನು ಆಯೋಜಿಸಿದ ಮಾಂಡ್‍ಸೊಭಾಣ್ ಪ್ರಯತ್ನವನ್ನು ಶ್ಲಾಘಿಸಿದರು. ಮಾಂಡ್‍ಸೊಭಾಣ್ ಗುರಿಕಾರರಾದ ಎರಿಕ್ ಒಝೇರಿಯೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಲ್ಲಿ ಶಿಬಿರಾರ್ಥಿಗಳಿಂದ ತಾವು ಕಲಿತ ಹಾಡುಗಳ ಪ್ರಾತ್ಯಕ್ಷಿಕೆ ನಡೆಯಿತು.

ಅಕಾಡೆಮಿಯ ಅಧ್ಯಕ್ಷರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ  ಲಿಡ್ವಿನ್ ಕುಟಿನ್ಹ, ಮಾಂಡ್ ಸೊಭಾಣ್ ಅಧ್ಯಕ್ಷರಾದ  ಲುವಿ ಜೆ ಪಿಂಟೊ, ಅಕಾಡೆಮಿಯ ಸದಸ್ಯರಾದ   ಸಂತೋಶ್ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.   ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.


Spread the love