ಮಾಂಡ್ ಸೊಭಾಣ್ 2020-21 ಸಾಲಿನ ಅಧ್ಯಕ್ಷರಾಗಿ ಲುವಿ ಜೆ ಪಿಂಟೊ ಆಯ್ಕೆ
ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕೃತಿಕ್ ಸಂಘಟನೆ ಮಾಂಡ್ ಸೊಭಾಣ್ ಇದರ 33 ನೇ ವಾರ್ಷಿಕ ಮಹಾಸಭೆಯು ಕಲಾಂಗಣದಲ್ಲಿ ನಡೆಯಿತು. ಸಮಿತಿಗೆ ಆಯ್ಕೆಯಾದ ಸದಸ್ಯರು 2020-21 ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಪದಾಧಿಕಾರಿಗಳಾಗಿ ಎರಿಕ್ ಒಝೇರಿಯೊ (ಗುರಿಕಾರ) ಲುವಿ ಜೆ. ಪಿಂಟೊ, (ಅಧ್ಯಕ್ಷ), ನವೀನ್ ಲೋಬೊ (ಉಪಾಧ್ಯಕ್ಷ), ಸ್ಟ್ಯಾನಿ ಆಲ್ವಾರಿಸ್ (ಸಂಘಟಕ), ಕಿಶೋರ್ ಫೆರ್ನಾಂಡಿಸ್ (ಕಾರ್ಯದರ್ಶಿ), ಸುನೀಲ್ ಮೊಂತೆರೊ (ಜತೆ ಕಾರ್ಯದರ್ಶಿ), ಎಲ್ರೊನ್ ರೊಡ್ರಿಗಸ್ (ಖಜಾಂಚಿ), ವಿಕ್ಟರ್ ಮತಾಯಸ್ (ಸಾರ್ವಜನಿಕ ಸಂಪರ್ಕ ಅಧಿಕಾರಿ) ಆಯ್ಕೆಗೊಂಡರು.
ಅರುಣ್ ರಾಜ್ ರೊಡ್ರಿಗಸ್, ಬನ್ನು ಫೆರ್ನಾಂಡಿಸ್, ಐರಿನ್ ರೆಬೆಲ್ಲೊ, ರೊನಿ ಕ್ರಾಸ್ತಾ, ಕ್ಲಾರಾ ಡಿಕುನ್ಹಾ, ಲಾರೆನ್ಸ್ ಡಿಸೋಜ, ಜಾಸ್ಮಿನ್ ಲೋಬೊ, ರವೀಂದ್ರ ಎಮ್. ನಾಯಕ್, ಲವೀನಾ ದಾಂತಿ, ಜೊಯೆಲ್ ಮಸ್ಕರೇನ್ಹಸ್ ಹಾಗೂ ಜೇಮ್ಸ್ ಲೊಪಿಸ್ ಸದಸ್ಯರಾಗಿ ಹಾಗೂ ಜೊಯ್ ಫೆರ್ನಾಂಡಿಸ್ (ಗೋವಾ), ಡಯಾನ್ ಡಿಸೋಜ (ದುಬಾಯ್), ಸುನೀಲ್ ಡಿಸಿಲ್ವಾ (ಖತಾರ್) ಹಾಗೂ ಹ್ಯಾರಿಯೆಟ್ ವಿದ್ಯಾಸಾಗರ್ (ಯುಎಸ್ಎ) ಪ್ರತಿನಿಧಿಗಳಾಗಿ ನೇಮಕಗೊಂಡರು.
ರೊಯ್ ಕ್ಯಾಸ್ತೆಲಿನೊ (ಪಿರ್ಜೆಂತ್) ಮತ್ತು ರೊನಾಲ್ಡ್ ಮೆಂಡೊನ್ಸಾ (ಕಲಾಂಗಣ್ ಚೇರ್ ಮ್ಯಾನ್) ಪದನಿಮಿತ್ತ ಸದಸ್ಯರಾಗಿರುತ್ತಾರೆ.