ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತನ ಕೊಲೆ: 4 ಮಂದಿ ಆರೋಪಿಗಳ ಬಂಧನ
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಆಪ್ತ, ಕಾಂಗ್ರೆಸ್ ಮುಖಂಡ ಅಣ್ಣಪ್ಪ ನಿಂಬಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ ಅಣ್ಣಪ್ಪ ನಿಂಬಾಳ ಅವರ ಕೊಲೆ ನಡೆದಿತ್ತು. ತನಿಖೆ ಚುರುಕುಗೊಳಿಸಿದ ಖಾಕಿ ಪಡೆ ನೆರೆಯ ಪಾಂಡೆಗಾಂವ ಗ್ರಾಮದ ವಿಠಲ ಶ್ರವಣಕುಮಾರ ಪೂಜೇರಿ (30) ಶಿರೂರ ಗ್ರಾಮದ ಶಿವಾಜಿ ಲಹು ಹಜಾರೆ (26) ಸುಖದೇವ ರಘುನಾಥ ಹಜಾರೆ (26) ಸಂತೋಷ ಅವಜಿ ಹೋನಮೋರೆ (24) ಎಂಬವರನ್ನು ಬಂಧಿಸಿದ್ದಾರೆ.
ಕೇವಲ 20 ಗುಂಟೆ ಜಮೀನಿಗಾಗಿ ಪ್ರಭಾವಿ ಕಾಂಗ್ರೆಸ್ ಮುಖಂಡನ ಹತ್ಯೆ ಆಯ್ತಾ ಅನ್ನೋ ಅನುಮಾನ ಕಾಡುತ್ತಿದೆ. ಮಾಜಿ ಡಿಸಿಎಂ ಸವದಿ ಆಪ್ತ ಅಣ್ಣಪ್ಪ ನಿಂಬಾಳ ಭೀಕರ ಹತ್ಯೆಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಅವರಿಸಿದ್ದು ಕೊಲೆಯ ಹಿಂದಿನ ಅಸಲಿ ಸತ್ಯ ತಿಳಿಯಬೇಕಿದೆ.