Home Mangalorean News Kannada News ಮಾಜಿ ಶಾಸಕ ಸಭಾಪತಿ ಹೆಸರಿನಲ್ಲಿ ಪ್ರಮೋದ್ ಅವರ ಅವಹೇಳನ; ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿಘ್ನೇಶ್...

ಮಾಜಿ ಶಾಸಕ ಸಭಾಪತಿ ಹೆಸರಿನಲ್ಲಿ ಪ್ರಮೋದ್ ಅವರ ಅವಹೇಳನ; ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿಘ್ನೇಶ್ ಕಿಣಿ ಖಂಡನೆ

Spread the love

ಮಾಜಿ ಶಾಸಕ ಸಭಾಪತಿ ಹೆಸರಿನಲ್ಲಿ ಪ್ರಮೋದ್ ಅವರ ಅವಹೇಳನ; ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿಘ್ನೇಶ್ ಕಿಣಿ ಖಂಡನೆ

ಉಡುಪಿ: ಉಡುಪಿಯ ಮಾಜಿ ಶಾಸಕ ಯು ಆರ್ ಸಭಾಪತಿ ಅವರ ಹೆಸರಿನಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್  ಅವರ ವಿರುದ್ದ  ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವ ಕೀಳು ಮನಸ್ಸಿನ ವ್ಯಕ್ತಿಗಳ ವರ್ತನೆ ವಿರುದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಚುನಾವಣಾ ಸಮಯ ಹತ್ತಿರ ಬರುತ್ತಿರುವ ವೇಳೆಯಲ್ಲಿ ಉಡುಪಿ ವಿಧಾನಸಭಾಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸೋಲುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದ್ದು ಇದರಿಂದ ಹತಾಶರಾಗಿ ನೆಚ್ಚಿನ ಶಾಸಕ, ಸಚಿವರಾದ ಪ್ರಮೋದ್ ಮಧ್ವರಾಜ್ ಬಗ್ಗೆ ಮಾಜಿ ಶಾಸಕ ಸಭಾಪತಿ ಅವರ ಹೆಸರಿನಲ್ಲಿ ಇಲ್ಲಸಲ್ಲದ ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಡುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ.
ಪ್ರಮೋದ್ ಮಧ್ವರಾಜ್ ಶಾಸಕರಾಗಿ, ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ, ಮೀನುಗಾರಿಕಾ ಯುವ ಸಬಲೀಕರಣ, ಕ್ರೀಡಾ ಸಚಿವರಾಗಿ ಉಡುಪಿ ಕ್ಷೇತ್ರಕ್ಕೆ ಸುಮಾರು 2000 ಕೋಟಿ ರೂ. ಗಳಿಗೂ ಮಿಕ್ಕಿ ಅನುದಾನದವನ್ನು ತಂದು ಉಡುಪಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಭ್ರಷ್ಟಾಚಾರ ರಹಿತ ಸೇವೆ ಅಲ್ಲದೆ ಮತದಾರರ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲು ನಮಗೆ ಹೆಮ್ಮೆಯಿದೆ. ಪ್ರಮೋದ್ ಮಧ್ವರಾಜ್ ಅವರು ಪ್ರತಿವಾರ ತನ್ನ ಕಚೇರಿಯಲ್ಲಿ ಜನರ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಮಾಡುತ್ತಿದ್ದು, ಹಾಗೂ ಜನಸ್ಪಂದನ ಕಾರ್ಯಕ್ರಮದ ಮುಕಾಂತರ ಆಗಾಗ ತಾಲೂಕು ಕಚೇರಿ ಹಾಗೂ ನಗರಸಭೇಯಲ್ಲಿ ಅಧಿಕಾರಿಗಳೊಂದಿಗೆ ಜನರ ಸಮಸ್ಯೆಯನ್ನು ಚರ್ಚಿಸಿ ಪ್ರಾಮಾಣಿಕವಾಗಿ ಕಡತಗಳನ್ನು ತ್ವರಿತವಾಗಿ ಇತ್ಯರ್ಥಮಾಡುವುದರ ಮೂಲಕ ಜನರ ಶ್ಲಾಘನೆಗೆ ಪಾತ್ರರಾಗಿರುತ್ತಾರೆ. ಅಲ್ಲದೆ ಇವರ ಇಂತಹ ಸಚಿವರ ಕಾರ್ಯವೈಖರಿಯನ್ನು ಮೆಚ್ಚಿದ ಪ್ರಜಾವಾಣಿ ಮತ್ತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳು ಮಾಡಿದ ಸಮೀಕ್ಷೆಯಲ್ಲಿ ನಂಬರ್ ಒನ್ ಶಾಸಕರಾಗಿ ಹೊಮ್ಮಿದ್ದು ಇವರ ದಕ್ಷತೆಯನ್ನು ತೋರಿಸುತ್ತದೆ. ಇಂತಹ ಸುಳ್ಳು ಪ್ರಚಾರಗಳಿಗೆ ಉಡುಪಿ ಪ್ರಜ್ಞಾವಂತ ನಾಗರಿಕರು ಎಂದಿಗೂ ಸೊಪ್ಪು ಹಾಕುವುದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ.
ಸಚಿವರ ಮೇಲೆ ಆರೋಪ ಮಾಡುವವರು ದಾಖಲೆ ಸಮೇತ ಆರೋಪ ಮಾಡಬೇಕೆ ವಿನಹ ಈ ರೀತಿ ಹಿಂಬಾಗಿಲ ಮೂಲಕ ರಾಜಕೀಯ ಮಾಡಿ ಚಾರಿತ್ರ್ಯ ಹರಣ ಮಾಡುತ್ತಿರುವುದು ಅವರ ಹತಾಶ ಮನೋಭಾವವನ್ನು ತೋರಿಸುತ್ತದೆ. ಸಚಿವ ಪ್ರಮೋದ್ ಭೃಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಕುರಿತು ನಿಖರ ದಾಖಲೆಗಳಿದ್ದಲ್ಲಿ ಬಹಿರಂಗಪಡಿಸಿದರೆ ಅಂತಹವರ ಯುವ ಕಾಂಗ್ರೆಸ್ ಕೂಡ ಬಹಿರಂಗ ಚರ್ಚೆಗೆ ಸಿದ್ದವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Spread the love

Exit mobile version