Home Mangalorean News Kannada News ಮಾದಕ ವ್ಯಸನ ವಿರೋಧಿ ಜಾಗೃತಿ; ಸೆಲ್ಫಿ ವಿದ್ ಸಹಿ ಸಂಗ್ರಹ ಅಭಿಯಾನದ ಅದೃಷ್ಠಶಾಲಿ ವಿಜೇತರ ಡ್ರಾ

ಮಾದಕ ವ್ಯಸನ ವಿರೋಧಿ ಜಾಗೃತಿ; ಸೆಲ್ಫಿ ವಿದ್ ಸಹಿ ಸಂಗ್ರಹ ಅಭಿಯಾನದ ಅದೃಷ್ಠಶಾಲಿ ವಿಜೇತರ ಡ್ರಾ

Spread the love

ಮಾದಕ ವ್ಯಸನ ವಿರೋಧಿ ಜಾಗೃತಿ; ಸೆಲ್ಫಿ ವಿದ್ ಸಹಿ ಸಂಗ್ರಹ ಅಭಿಯಾನದ ಅದೃಷ್ಠಶಾಲಿ ವಿಜೇತರ ಡ್ರಾ

ಉಡುಪಿ: ಉಡುಪಿ ಜಿಲ್ಲಾ ಪೋಲಿಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಇವರುಗಳ ಜಂಟಿ ಆಶ್ರಯದಲ್ಲಿ ಉಡುಪಿಯ ಬಿಗ್ ಬಜಾರ್ ಮತ್ತು ಮಣಿಪಾಲದ ಕೆನರಾ ಮಾಲ್‍ನಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಅಭಿಯಾನದ ಪ್ರಯುಕ್ತ ಆಯೋಜಿಸಿದ ಸೆಲ್ಫಿ ವಿದ್ ಸಹಿ ಸಂಗ್ರಹ ಅದೃಷ್ಠಶಾಲಿ ವಿಜೇತರ ಡ್ರಾ ಮಂಗಳವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ನಡೆಯಿತು.

ಬಿಗ್ ಬಜಾರ್‍ನಲ್ಲಿ ಭಾಗವಹಿಸಿದ ಐದು ಅದೃಷ್ಠಶಾಲಿಗಳು ಹಾಗೂ ಕೆನರಾ ಮಾಲ್‍ನಲ್ಲಿ ಭಾಗವಹಿಸಿದ 10 ಮಂದಿ ಅದೃಷ್ಠಶಾಲಿಗಳಿಗೆ ತಲಾ ರೂ. 1000 ಮೌಲ್ಯದ ಗಿಫ್ಟ್ ವೋಚರ್‍ಗಳನ್ನು ನೀಡಲಾಗಿದ್ದು, ಅಕ್ಯುಮೆನ್ ಟ್ರೈನಿಂಗ್ ಸೆಂಟರ್ ಮಂಗಳೂರು ಮತ್ತು ಮೆಕ್ ಡೊನಾಲ್ಡ್ ಮಣಿಪಾಲ ಸಂಸ್ಥೆ ಗಿಫ್ಟ್ ವೋಚರುಗಳನ್ನು ಪ್ರಾಯೋಜಿಸಿದ್ದಾರೆ. ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಡ್ರಾವನ್ನು ನಡೆಸಿಕೊಟ್ಟರು.

ಈ ವೇಳೆ ಡಿಸಿಐಬಿಯ ಸಂಪತ್ ಕುಮಾರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಸಹಕಾರ್ಯದರ್ಶಿ ಮೈಕಲ್ ರೊಡ್ರಿಗಸ್, ಕೋಶಾಧಿಕಾರಿ ದಿವಾಕರ್ ಹಿರಿಯಡ್ಕ, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್, ಸಹಸಂಚಾಲಕ ಅನೀಶ್ ಡಿಸೋಜಾ, ಸೆಲ್ಫಿ ವಿದ್ ಸಹಿ ಸಂಗ್ರಹ ಅಭಿಯಾನದ ಪದಾಧಿಕಾರಿಗಳಾದ ಪಲ್ಲವಿ ಸಂತೋಷ್, ಅಶೋಕ್ ಪೂಜಾರಿ, ತೃಪ್ತಿ, ಸೂರಜ್, ಅಂಕಿತ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಯತೀಶ್ ಉಪಸ್ಥಿತರಿದ್ದರು.

ಅದೃಷ್ಟಶಾಲಿ ವಿಜೇತರ ವಿವರ ಇಂತಿದೆ.

ಬಿಗ್ ಬಜಾರ್ ವಿಜೇತರು : 170 (ವೆರೋನಿಕಾ) , 267 (ವಿಜಯ್ ಕರ್ಕೇರಾ), 144 (ನಾಗೇಶ್ ಪೈ), 59 (ಪೂರ್ಣೆಂದ್ರ) ಮತ್ತು 58 (ನೀಲ್) ಆಗಿದ್ದು, ಕೆನರಾ ಮಾಲ್ ವಿಜೇತರು : 172 (ನಯನ್), 325 (ಮುಸ್ತಾಕಿನ್), 490 (ಪ್ರವೀಣ್ ಕುಮಾರ್), 497 (ಪ್ರಿಯಾಂಕ), 01 (ಕುಮಾರಸ್ವಾಮಿ), 74 (ಧೀರಜ್), 394 (ಅನಂತ್), 256 (ನಿಧಿ ಕಲಾನಿ), 132 (ಅನನ್ಯಾ), 474 (ಕಿರಣ್).

ವಿಜೇತರು ತಮ್ಮ ಬಹುಮಾನಗಳನ್ನು ಸಪ್ಟೆಂಬರ್ 5ರ ಒಳಗಾಗಿ ಉಡುಪಿ ಪ್ರೆಸ್ ಕ್ಲಬ್ ಕಚೇರಿಯಿಂದ ಪಡೆದುಕೊಳ್ಳತಕ್ಕದ್ದು.


Spread the love

Exit mobile version