ಮಾಧ್ಯಮದ ಮೇಲೆ ದಬ್ಬಾಳಿಕೆ ಮಾಡುತ್ತಿರುವ ರಾಜ್ಯ ಸರಕಾರ; ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಖಂಡನೆ
ಬೆಂಗಳೂರು: ಮಾಧ್ಯಮದ ಮೇಲೆ ದಬ್ಬಾಳಿಕೆ ಮಾಡುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಟುವಾಗಿ ಖಂಡಿಸಿದೆ
ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆಯದೆ ಪತ್ರಕರ್ತನ ಮನೆಗೆ ನುಗ್ಗಿದ ಪೊಲೀಸರು, ಪತ್ರಕರ್ತನ ಪತ್ನಿಯ ಮೊಬೈಲ್ ಕಸಿದು ದಬ್ಬಾಳಿಕೆ ಎಸಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ, ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾರಂಗದ ಕತ್ತು ಹಿಸುಕಲು ಹೊರಟಿರುವ, ರಾಜ್ಯ ಸರ್ಕಾರದ ನಡೆ ಖಂಡನೀಯ. ಪತ್ರಕರ್ತರು ತಪ್ಪು ಮಾಡಿದ್ದರು, ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳಲು ನಿರ್ದಿಷ್ಟ ಅವಕಾಶಗಳಿರುತ್ತವೆ. ಆದರೆ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ, ಪತ್ರಕರ್ತರ ಮೇಲೆ ಸೇಡಿನ ಕ್ರಮ ಕೈಗೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಬಿ ನಾರಾಯಣ್ ಖಂಡಿಸಿದ್ದಾರೆ.