ಮಾನವೀಯತೆಗಿಂತ ಹಿರಿತನ ಮತ್ತೊಂದಿಲ್ಲ – ವೇದವ್ಯಾಸ್ ಕಾಮತ್
ಎಕ್ಕೂರು ಧ್ರುವ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಇದರ ನಿವಾಸಿಗಳು ಒಟ್ಟು ಸೇರಿ ಕರ್ನಾಟಕದ ಮುಖ್ಯಮಂತ್ರಿ ಬರ ಪರಿಹಾರ ನಿಧಿಗೆ 50 ಸಾವಿರ ಮೊತ್ತದ ಚೆಕ್ಕನ್ನು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಾಜ್ಯದ ಹಲವಾರು ಕಡೆಗಳಲ್ಲಿ ನೈಸರ್ಗಿಕ ವಿಕೋಪದಿಂದ ಜನರು ತತ್ತರಿಸಿ ಹೋಗಿದ್ದಾರೆ. ಮೊನ್ನೆಯ ವರೆಗೂ ತಮ್ಮ ಮನೆಯಲ್ಲಿ ಸಂತೋಷದಿಂದ ಬದುಕುತ್ತಿದ್ದ ಅನೇಕ ಕುಟುಂಬಗಳು ಸೂರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಮ್ಮ ಸರಕಾರವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆಯಾದರೂ ಸಾರ್ವಜನಿಕರೂ ಕೂಡ ನೆರೆ ಸಂತ್ರಸ್ತರ ಜೊತೆ ನಿಲ್ಲಬೇಕು ಎಂದರು.ಭಾರತ ಹಿಂದಿನಿಂದಲೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರುತ್ತಲೇ ಬಂದಿದೆ. ಸಂಕಷ್ಟದಲ್ಲಿದ್ದವರಿಗೆ ಸಹಾಯಾಸ್ತ ಚಾಚುವುದೇ ಮಾನವೀಯತೆ.ಹಾಗಾಗಿ ಮಾನವೀಯ ಮೌಲ್ಯಗಳಿಗಿಂತ ಹಿರಿತನ ಮತ್ತೊಂದಿಲ್ಲ.ಧ್ರುವ ರೆಸಿಡೆನ್ಸಿಯ ನಿವಾಸಿಗಳಂತೆ ಎಲ್ಲರೂ ತಮ್ಮ ಕೈಲಾಗುವಷ್ಟು ಸಹಾಯ ಮಾಡಿರಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ದ ಕೋಶಾಧಿಕಾರಿ ಕಿರಣ್ ರೈ, ಅಪಾರ್ಟ್ಮೆಂಟಿನ ಅಧ್ಯಕ್ಷರಾದ ಶ್ರೀಮತಿ ಸುಜಾತ ಕುಲಾಲ್, ಕೆಎಸ್ಆರ್ಪಿ ಕಮಾಂಡೆಂಟ್ ಶ್ರೀ ಜನಾರ್ಧನ್, ಅಪಾರ್ಟ್ಮೆಂಟ್ ಕಾರ್ಯದರ್ಶಿ ಗಿರೀಶ್, ಡಾಕ್ಟರ್ ಶಿವಕುಮಾರ್, ನಿರಂಜನ್, ಹೇಮಂತ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.