Home Mangalorean News Kannada News ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸೋಣ – ವಂ. ಫಾ. ಡಯನೀಶಿಯಸ್ ವಾಸ್. ಎಸ್. ಜೆ.

ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸೋಣ – ವಂ. ಫಾ. ಡಯನೀಶಿಯಸ್ ವಾಸ್. ಎಸ್. ಜೆ.

Spread the love

ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸೋಣ – ವಂ. ಫಾ. ಡಯನೀಶಿಯಸ್ ವಾಸ್. ಎಸ್. ಜೆ.

ಮಂಗಳೂರು: ಸಂತ ಅಲೋಶಿಯಸ್ ಪ್ರೌಢ ಶಾಲೆ, ಕೊಡಿಯಾಲ್‍ಬೈಲ್ ಮಂಗಳೂರು ಶಾಲಾ ಸಭಾಂಗಣದಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ರೋಶನಿ ನಿಲಯ ಸಂಸ್ಥೆಯ ಖ್ಯಾತ ಉಪನ್ಯಾಸಕಿ  ಸಾಂಡ್ರಾ ಲೋಬೊ ವಿದ್ಯಾರ್ಥಿಗಳಿಗೆ, ಇತರರ ಒಳ್ಳೆಯತನವನ್ನು ಗ್ರಹಿಸಲು, ಧನಾತ್ಮಕತೆಯನ್ನು ಮೈಗೂಡಿಸಲು ಹಾಗೂ ಉತ್ತಮ ನಡತೆಯನ್ನು ಬೆಳೆಸಿ ಉಳಿಸಿಕೊಳ್ಳಲು ಕರೆ ನೀಡಿದರು. ಹೆತ್ತವರಿಗೂ ತಮ್ಮ ಮಕ್ಕಳೊಂದಿಗಿನ ಆತ್ಮೀಯತೆಯನ್ನು ಬಲಗೊಳಿಸಲು ಸಲಹೆ ನೀಡಿದರು.

ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿರುವ ವಂದನೀಯ ಫಾದರ್ ರೆಕ್ಟರ್ ಡಯನೀಶಿಯಸ್ ವಾಸ್. ಎಸ್.ಜೆ., ಅಧ್ಯಕ್ಷಸ್ಥಾನದಿಂದ, ವಿದ್ಯಾರ್ಥಿಗಳನ್ನು ಅಭಿನಂದಿಸುತ್ತ, ಮಾನವೀಯ ಮೌಲ್ಯಗಳಾದ ಸನ್ನಡತೆ, ಸಚ್ಚಾರಿತ್ರ್ಯ ಮತ್ತು ಅತ್ಯುತ್ತಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿ ಸಮಾಜಕ್ಕೆ ಬೆಳಕಾಗಿ ಬದುಕಲು ಕರೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ಜೆರಾಲ್ಡ್ ಫುರ್ಟಾಡೊ ಎಸ್.ಜೆ. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಶಾಲಾ ಜೀವನದಲ್ಲಿ ವಿದ್ಯಾರ್ಥಿಗಳು ಪಡೆದ ಶಿಕ್ಷಣ ಭವಿಷ್ಯದ ಬಾಳಿಗೆ ದಾರಿ ದೀಪವಾಗಲ್ಲುದು; ವಿದ್ಯಾರ್ಥಿಗಳು ಇತರರ ನೋವಿಗೆ ಸದಾ ಸ್ಪಂದಿಸುವ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು. ಶಾಲಾ ಉಪಮುಖ್ಯೋಪಾಧ್ಯಾಯರಾದ ಗೋಪಾಲ್ ಕೃಷ್ಣ ಎಸ್ ಹಾಗೂ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ  ರೇಖಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಶಿಕ್ಷಕಿ ರೆನ್ನಿ ವಾಸ್ ನೇತೃತ್ವದಲ್ಲಿ ಪ್ರಾರ್ಥನಾ ವಿಧಿ ನೆರವೇರಿತು. ಶಿಕ್ಷಕ  ಫ್ರಾನ್ಸಿಸ್ ಮಸ್ಕರೇನಸ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮಾಸ್ಟರ್ ಶರಣ್ ಹಾಗೂ ಕುಮಾರಿ ಡ್ಯಾಫ್ನಿ ಶಾಲಾ ಜೀವನದ ಸವಿನೆನಪುಗಳನ್ನು ಸ್ಮರಿಸಿ ಮಾತನಾಡಿದರು.

ಶಿಕ್ಷಕ ಪ್ರವೀಣ್ ಮೊಂತೆರೊ,  ಭಾರತಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶ್ರೀಮತಿ ಡಯಾನಾ ಗೋವಿಯಸ್ ವಂದಿಸಿದರು. ಬಹುಮಾನ ವಿತರಣೆಯಲ್ಲಿ ಶಿಕ್ಷಕಿ ಶೆರಿಲ್ ಪ್ರಭು ಸಹಕರಿಸಿದರು. ಶಿಕ್ಷಕಿಯರಾದ ಸುನಿತಾ ಪಾಯ್ಸ್ ಹಾಗೂ ಲಿನೆಟ್ ಮಥಾಯಸ್ ಸಹಕರಿಸಿದರು. ಕಾರ್ಯಕ್ರಮದ ಕೊನೆಗೆ. ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ವಿದ್ಯಾರ್ಥಿಗಳ ಹೆತ್ತವರೂ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಶಿಕ್ಷಕ ಫ್ರಾನ್ಸಿಸ್ ಮಸ್ಕರೇನ್ಹಸ್ ಕಾರ್ಯಕ್ರಮವನ್ನು ಸಂಘಟಿಸಿದರು.


Spread the love

Exit mobile version