ಮಾನವ ಹಕ್ಕು ಉಲ್ಲಂಘನೆ ಶಿಕ್ಷಾರ್ಹ ಅಪರಾಧ- ಹಿರಿಯ ಸಿವಿಲ್ ನ್ಯಾಯಾಧೀಶರು
ಉಡುಪಿ : ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತವಾಗಿ ಮತ್ತುಸ್ವಾಭಿಮಾನದಿಂದ ಬದುಕುಕುವಂತೆ ನೋಡಿಕೊಳ್ಳುವುದೇ ಮಾನವ ಹಕ್ಕುಗಳ ಉದ್ದೇಶ , ಮಾನವ ಹಕ್ಕುಗಳ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಲತಾ ತಿಳಿಸಿದ್ದಾರೆ.
ಅವರು ಶನಿವಾರ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಸಂಸ್ಥೆಯಲ್ಲಿ ನಿರ್ಣಯಿಸಿದ ಈ ಮಾನವ ಹಕ್ಕುಗಳ ಬಗ್ಗೆ , ರಾಷ್ಟ್ರದ ಸಂವಿಧಾನದಲ್ಲಿ ಸಹ ಅಳವಡಿಸಿಕೊಂಡಿದ್ದು, ದೇಶದಲ್ಲಿ ಯಾವುದೇ ಪ್ರಜೆ ವರ್ಣಭೇದ, ಲಿಂಗಬೇಧ ವಿಲ್ಲದೇ ಎಲ್ಲರೂ ಸಮಾನರು ಎಂದು ತಿಳಿಸಲಾಗಿದೆ, ಅಲ್ಲದೇ ದೇಶದ ಕಾನೂನಿನ ಮುಂದೆ ಎಲ್ಲರೂ ಒಂದೇ ಆಗಿದ್ದು , ದೇಶದ ಕಾನೂನು ಪ್ರತಿಯೋಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಮಾನವ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷ ಉದಯಶೆಟ್ಟಿ ಇನ್ನಾ, ಉಡುಪಿ ತಹಸೀಲ್ದಾರ್ ಮಹೇಶ್ಚಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕರಿ ಶೇಷಪ್ಪ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು.