ಮಾರಿಗುಡಿ ದೇವಸ್ಥಾನಗಳಲ್ಲಿ ಸುಗ್ಗಿ ಮಾರಿಪೂಜೆ- ಸರಳ ಆಚರಣೆಗೆ ಡಿಸಿ ಜಿ. ಜಗದೀಶ್ ಸೂಚನೆ

Spread the love

ಮಾರಿಗುಡಿ ದೇವಸ್ಥಾನಗಳಲ್ಲಿ ಸುಗ್ಗಿ ಮಾರಿಪೂಜೆ- ಸರಳ ಆಚರಣೆಗೆ ಡಿಸಿ ಜಿ. ಜಗದೀಶ್ ಸೂಚನೆ

ಉಡುಪಿ : ಕೋವಿಡ್-19 (ಕೊರೊನಾ ವೈರಾಣು ಕಾಯಿಲೆ 2019) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸಿ.ಆರ್. ಪಿ.ಸಿ ಸೆಕ್ಷನ್ 144(3) ಜಾರಿಗೊಳಿಸಲಾಗಿದ್ದು, ಜಾತ್ರೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿರುತ್ತದೆ.

ಆದ್ದರಿಂದ ಕಾಪು ತಾಲೂಕಿನ ಪಡು ಹಾಗೂ ಉಳಿಯಾರಗೋಳಿ ಗ್ರಾಮದಲ್ಲಿರುವ ಹಳೆ ಮಾರಿಗುಡಿ, ಹೊಸ ಮಾರಿಗುಡಿ ಹಾಗೂ ಮೂರನೇ ಮಾರಿಗುಡಿ ದೇವಸ್ಥಾನದಲ್ಲಿ ಮಾರ್ಚ್ 24 ಹಾಗೂ 25 ರಂದು ಕಾಲಾವಧಿ ಸುಗ್ಗಿ ಮಾರಿಪೂಜೆಯನ್ನು ದೇವಳದ ಸಮಿತಿ, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಮಾತ್ರ ಭಾಗವಹಿಸಿ, ಸರಳವಾಗಿ ಆಚರಿಸುವಂತೆ ಹಾಗೂ ಸದರಿ ಜಾತ್ರೆ ದಿನಗಳಂದು ಕೋಳಿ, ಆಡು, ಕುರಿಗಳನ್ನು ಬಲಿ ಅರ್ಪಿಸುವ ಹರಕೆ ಸೇವೆಯನ್ನು ಮತ್ತು ಕೋಳಿ, ಆಡು, ಕುರಿ ಇತ್ಯಾದಿಗಳ ಮಾರಾಟವನ್ನು ನಿರ್ಬಂಧಿಸಿದೆ.

ಕಾಪು ಪುರಸಭೆಗೆ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಕೋಳಿ, ಆಡು, ಕುರಿ ಸಾಗಾಟ ವಾಹನಗಳು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಹಾಗೂ ಜಾತ್ರೆಯ ಎರಡು ದಿನಗಳಲ್ಲಿ ಕಾಪು ಪುರಸಭೆಯ ಎಲ್ಲಾ ಮಾಂಸದಂಗಡಿ / ಚಿಕನ್ ಸ್ಟಾಲ್ / ಕೋಳಿ ಫಾರ್ಮ್‍ಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.


Spread the love