Home Mangalorean News Kannada News ಮಾರ್ಚ್ 1 ರಂದು ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ‘ಆತ್ಮಹತ್ಯೆ ತಡೆ ಅಭಿಯಾನ’

ಮಾರ್ಚ್ 1 ರಂದು ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ‘ಆತ್ಮಹತ್ಯೆ ತಡೆ ಅಭಿಯಾನ’

Spread the love

ಮಾರ್ಚ್ 1 ರಂದು ಮಂಗಳೂರು ಧರ್ಮಪ್ರಾಂತ್ಯ ವತಿಯಿಂದ ‘ಆತ್ಮಹತ್ಯೆ ತಡೆ ಅಭಿಯಾನ’

ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಪರಮ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರ ಮುಂದಾಳತ್ವದಲ್ಲಿ ಸಾಮಾಜಿಕ ಹಾಗೂ ಪರಿಸರ ಕಳಕಳಿಯ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಲಾವ್ದಾತೊಸಿ ಸಮಿತಿಯ ಮೂಲಕ ಪರಿಸರ ಸಂರಕ್ಷಣೆಯ ಪಣ ತೊಟ್ಟು ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳ ಪರಿಮಿತಿಯಲ್ಲಿ ಗಿಡಗಳನ್ನು ನೆಟ್ಟು ಪೊಶಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಪ್ರಸ್ತುತ ವರ್ಷವನ್ನು ಮಂಗಳೂರು ಧರ್ಮಪ್ರಾಂತ್ಯದಲ್ಲಿ “ಮನುಷ್ಯ ಜೀವದ ಆರೈಕೆ ಮತ್ತು ರಕ್ಷಣೆಯ ವರ್ಷವಾಗಿ ಘೋಶಿಸಲಾಗಿದೆ.

ಲಾವ್ದಾತೊ ಸಿ ಸಮಿತಿ ಮಂಗಳೂರು ಧರ್ಮಪ್ರಾಂತ್ಯ, ಈ ಸಂದರ್ಭದಲ್ಲಿ “ಆತ್ಮಾಹತ್ಯೆ ತಡೆ ಅಭಿಯಾನ” ವನ್ನು ಮಾರ್ಚ್ 1 2020 ರಂದು ಮಂಗಳೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ (ದಕ್ಷಿಣ ಕನ್ನಡ ಹಾಗೂ ಕಾಸರಗೋಡು) ಜಿಲ್ಲೆಯ ಎಲ್ಲಾ ಚರ್ಚುವ್ಯಾಪ್ತಿಗಳಲ್ಲಿ ಆಯೋಜಿಸಲಾಗಿದೆ. ಈ ಆಭಿಯಾನದ ವಿವರ ಮತ್ತು ಕಾರ್ಯ ವಿಧಾನ ಈ ಕೆಳಗಿನಂತಿದೆ.

1.ಭಾನುವಾರದ ಬಲಿಪೂಜೆ ಮತ್ತು ಪ್ರಾರ್ಥನಾ ವಿಧಿಗಳು:- ಮಾರ್ಚ್ 01. 2020 ಭಾನುವಾರ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಬಲಿಪೂಜೆ, ಪ್ರಾರ್ಥನಾ ವಿಧಿಗಳನ್ನು ಆಯೋಜಿಸಲಾಗಿದೆ. ಮನುಷ್ಯ ಜೀವ ದೇವರ ವರವಾಗಿದೆ. ಈ ಜೀವವನ್ನು ಯೋಗ್ಯ ರೀತಿಯಿಂದ ಜೀವಿಸಲು ದೇವರ ಕೃಪಾವರಗಳನ್ನು ಬೇಡುವುದೇ ಇದರ ಉದ್ದೇಶವಾಗಿದೆ.

2.ಪ್ರತಿಜ್ಞಾವಿಧಿ:- ‘ಜೀವನದ ಯಾವುದೇ ತಿರುವಿನಲ್ಲಿ, ಯಾವುದೇ ಕಷ್ಟಕರ ಪರಿಸ್ಧಿತಿಯಲ್ಲಿ ನಾನು ಆತ್ಮಹತ್ಯೆ ಮಾಡುವುದಿಲ್ಲ ಹಾಗೂ ನನ್ನ ಕುಟುಂಬದಲ್ಲಿ, ಸ್ನೇಹಿತರ ವಲಯದಲ್ಲಿ ನೆರೆಹೊರೆಯಲ್ಲಿ ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡುವವರು ಗಮನಕ್ಕೆ ಬಂದರೆ ಅಂತಹ ವ್ಯಕ್ತಿಗಳನ್ನು ರಕ್ಷಿಸಲು ಪಣ ತೊಡುವೆ, ಅವರಿಗೆ ಸೂಕ್ತ ಸಮಾಲೋಚನೆ ಮತ್ತು ವೈದ್ಯಕೀಯ ನೆರವು ಸಿಗುವಂತೆ ಪ್ರಯತ್ನಿಸುವೆ”, ಎಂದು ಜನರು ಪ್ರತಿಜ್ಞೆ ಮಾಡಲಿದ್ದಾರೆ.

3.ಕರಪತ್ರಗಳು:- ಆತ್ಮಹತ್ಯೆ ತಡೆಯ ಬಗ್ಗೆ ಜಾಗ್ರತಿ ಹಾಗೂ ಶಿಕ್ಷಣ ನೀಡುವ ಸುಮಾರು 1 ಲಕ್ಷ ಕರಪತ್ರಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಿ ಜನರಿಗೆ ತಲುಪಿಸಲಾಗುವುದು. ಈ ಕರಪತ್ರಗಳನ್ನು ಆ ದಿನ ಎಲ್ಲರಿಗೆ ಹಂಚಲಾಗುವುದು.

4.ವಿಚಾರ ಸಂಕೀರ್ಣ ಮತ್ತು ಕಾರ್ಯಗಾರಗಳು:- ಆತ್ಮಹತ್ಯೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗ್ರತಿ ಮೂಡಿಸುವಂತಹ ವಿಚಾರ ಸಂಕೀರ್ಣ, ಕಾರ್ಯಗಾರ, ಇತ್ಯಾದಿಗಳನ್ನು ಚರ್ಚಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಜನರಿಗೆ ಆಯೋಜಿಸಲು ಕರೆನೀಡಲಾಗಿದೆ. ಈ ಕಾರ್ಯಗಾರಗಳನ್ನು ನಡೆಸಲು ಸುಮಾರು 50 ಸಂಪನ್ಮೂಲ ವ್ಯಕ್ತಿಗಳ ಪಂಗಡವನ್ನು ರಚಿಸಲಾಗಿದೆ.

5.ಆತ್ಮಹತ್ಯೆ ತಡೆ ಜೀವವಾಣಿ:- ಕರಪತ್ರಗಳ ಮೂಲಕ ಆತ್ಮಹತ್ಯೆ ತಡೆ ಜೀವವಾಣಿ; 0824 -298344 (24×7) ಸಂಖ್ಯೆಯನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಈ ಉಚಿತ ಫೋನ್ ಸಂಖ್ಯೆಗೆ ಕರೆಮಾಡಿ, ಸಂಬಧಿತ ವ್ಯಕ್ತಿಗಳು ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಬಹುದಾಗಿದೆ.

6.ಹಳದಿ ರಿಬ್ಬನ್:- ಮಾರ್ಚ್ 2ನೇ ತಾರೀಖು 2020, ರಂದು ಈ ಆತ್ಮಾಹತ್ಯೆ ತಡೆ ಅಭಿಯಾನದಲ್ಲಿ ಭಾಗವಹಿಸುವ ಎಲ್ಲರೂ, ಶಾಲೆ, ಕಛೇರಿ, ಮಾರ್ಕೆಟ್ ಮತ್ತಿತರ ಸ್ಥಳಗಳಿಗೆ ತೆರಳುವಾಗ ಈ ಹಳದಿ ಬಣ್ಣದ ಜಾಗ್ರತಿ ರಿಬ್ಬನ್ಸ್ಗಳನ್ನು ತಮ್ಮ ಬಟ್ಟೆಯ ಮೇಲೆ ಧರಿಸಿ, ಜಾಗ್ರತಿ ಮೂಡಿಸಲಿದ್ದಾರೆ.

7.ಉಲ್ಲಾಸಭರಿತ ಮುಖದ ಭಾವಚಿತ್ರ ಸ್ಪರ್ಧೆ (ಹ್ಯಾಪಿ ಫೇಸ್ ಫೊಟೊ) ಈ ಅಭಿಯಾನದ ವಿಶೇಷ ಆಕರ್ಷಣೆಯಾಗಿ ಉಲ್ಲಾಸಭರಿತ ಮುಖದ ಭಾವ ಚಿತ್ರ (ಊಚಿಠಿಠಿಥಿ ಈಚಿಛಿe Phoಣo ಅoಟಿಣesಣ) ಸ್ಪರ್ಧೆಯನ್ನು ಆಯೋಜಿಸಲಾಗಿದೆ. 12 ವರ್ಷಕ್ಕೆ ಮೇಲ್ಪಟ್ಟ ಯಾರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕೇವಲ ಮುಖದ ಫೋಟೊ (ಃusಣ size ಠಿhoಣo), ಸೆಲ್ಫಿ ಕೂಡ ಆಗಬಹುದು, ತೆಗೆದು, ಹೆಸರು, ವಿಳಾಸ ಮತ್ತು ಜನ್ಮ ದಿನಾಂಕದೊಂದಿಗೆ 7090449999 ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಬೇಕು. ಕಳುಹಿಸಿದ ಫೋಟೊಗಳಲ್ಲಿ, ಉಲ್ಲಾಸಭರಿತ ಮುಖದ ಎರಡು ಫೋಟೊಗಳನ್ನು (ಸ್ತ್ರೀ ಮತ್ತು ಪುರುಷ) ಆರಿಸಿ ರೂ. 10,000/- ಬಹುಮಾನ ನೀಡಲಾಗುವುದು. ಭಾವಚಿತ್ರ ಕಳುಹಿಸಲು ಕೊನೆಯ ದಿನಾಂಕ 30.04.2020. ಮೇ 15, 2020 ಒಳಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು.

8.ಮಾಧ್ಯಮಗಳಲ್ಲಿ ಪ್ರಚಾರ:- ಈ ಅಭಿಯಾನದ ಬಗ್ಗೆ ಧವರ್iಕ್ಷೇತ್ರ (ಚರ್ಚು) ವ್ಯಾಪ್ತಿಗಳಲ್ಲಿ ಲಭ್ಯವಿರುವ ಮಾಧ್ಯಮಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಜಾಗ್ರತಿ ಮೂಡಿಸಲು ಕರೆ ನೀಡಲಾಗಿದೆ.


Spread the love

Exit mobile version