ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ
ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮೇಲಿನ ಹಲ್ಲೆ ಖಂಡಿಸಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್, ಮಾ.22ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್. ಮಾರ್ಚ್ 3ರಂದು ಕನ್ನಡ ಒಕ್ಕೂಟದಿಂದ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದ್ದಾರೆ.
ಮಾ. 22ರ ಬಂದ್ಗೆ ಎಲ್ಲಾ ಆಟೋ ಸಂಘಟನೆಗಳು, ಹೋಟೆಲ್ ಕಾರ್ಮಿಕರು ಮತ್ತು ಎಲ್ಲಾ ಕಾರ್ಮಿಕರು ಬೆಂಬಲವಿದೆ. ನಮ್ಮ ಸಂಘಟನೆಯಿಂದ ಬಂದ್ಗೆ ಬೆಂಬಲವಿದೆ ಎಂದು ಭಾರತೀಯರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಹೂಡಿ ಚಿನ್ನಿ, ಡಾ.ಬಿ.ಆರ್ ಭೀಮ್ ಸೇವಾ ಸಮಿತಿ ಅಧ್ಯಕ್ಷ ಶ್ರೀ ಕಾಂತ್ ರಾವಣ್ ಹೇಳಿದ್ದಾರೆ.