ಮಾಲಿನ್ಯ ರಹಿತ ಮಂಗಳೂರಿಗಾಗಿ ಸೈಕ್ಲೊ-ವಾಕಥಾನ್
ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದೇ ಡಿಸೆಂಬರ್ 9ರಂದು ಮಾಲಿನ್ಯ ರಹಿತ ಮಂಗಳೂರಿಗಾಗಿ “ಸೈಕ್ಲೊ-ವಾಕಥಾನ್” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಂಗಳೂರು ಬೈಸಿಕಲ್ ಕ್ಲಬ್, ಸಹ್ಯಾದ್ರಿ ಸಂಚಯ, ದ.ಕ. ಬಸ್ಸು ಮಾಲಕರ ಸಂಘ ಮತ್ತು ಮಂಗಳೂರು ಫಾರೆಸ್ಟ್ ರೇಂಜ್ ಇವರುಗಳು ಈ ವಾಕಥಾನ್ಗೆ ಸಹಯೋಗ ನೀಡಲಿದ್ದಾರೆ. ಈ ವಾಕಥಾನ್ ಕಾರ್ಯಕ್ರಮವು ಬೆಳಗ್ಗೆ 6:30ಕ್ಕೆ ಸರಿಯಾಗಿ ಕಾಲೇಜಿನ ಮುಖ್ಯದ್ವಾರದಿಂದ ಹೊರಟು ಬಂಟ್ಸ್ ಹಾಸ್ಟೆಲ್-ಪಿವಿಎಸ್ ಸರ್ಕಲ್-ಬಳ್ಳಾಲ್ಬಾಗ್-ಮಣ್ಣಗುಡ್ಡ-ಲೇಡಿಹಿಲ್-ಉರ್ವಸ್ಟೋರ್ ನಂತ ಯು-ಟರ್ನ್ ಮಾಡಿ ಲೇಡಿಹಿಲ್-ಲಾಲ್ಬಾಗ್-ಪಿವಿಎಸ್ ಸರ್ಕಲ್-ಕರಂಗಲ್ಪಾಡಿ-ಸಂತ ಅಲೋಶಿಯಸ್ ಕಾಲೇಜಿನ ಶತಮಾನೋತ್ಸವ ಮೈದಾನದಲ್ಲಿ ಕೊನೆಗೊಳ್ಳಲಿದೆ.
ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಅಸೋಸಿಯೇಟ್ ಪ್ರೊಫೆಸರ್, ಪ್ರೊ. ರೋಹನ್ ಫೆರ್ನಾಂಡಿಸ್ರವರು ಮುಖ್ಯ ಅತಿಥಿಯಾಗಿ ಆಗಮಿಸುವರು. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ರೆ. ಫಾ. ಡಯನೀಶಿಯಸ್ ವಾಜ್, ಎಸ್.ಜೆ.ರವರು ಅಧ್ಯಕ್ಷತೆ ವಹಿಸಲಿರುವರು.