Home Mangalorean News Kannada News ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ

ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ

Spread the love

ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ

ಮಂಗಳೂರು: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜು ಇದರ ಬಿಎಸ್ ಡಬ್ಲ್ಯೂ ಸಹಯೋಗ ವೇದಿಕೆ ಹಾಗೂ ಪರಿವರ್ತನ ಚಾರೀಟೇಬಲ್ ಟ್ರಸ್ಟ್ (ರಿ.) ಇವರು ಜಂಟಿ ಆಶ್ರಯದಲ್ಲಿ ಮಂಗಳಮುಖಿಯರ ದಿನಾಚರಣೆಯನ್ನು ಮಾರ್ಚ್ 22 ರಂದು ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ವಾಯ್ಲೆಟ್ ಪಿರೇರಾ ಸಂಸ್ಥಾಪಕಿ ಹಾಗೂ ಅಜೀವ ಟ್ರಸ್ಟಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಹೇಳಿದರು .

ಸೋಮವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲೇಜಿನ ಧ್ಯೇಯ ವಾಕ್ಯದಂತೆ ಮಾನವೀಯತೆಯೇ ದೇವರ ಸೇವೆ ಎಂಬಂತೆ ಪ್ರತಿಯೊಬ್ಬರನ್ನು ಮಾನವೀಯತೆಯೊಂದಿಗೆ ಗೌರವಿಸುವುದರೊಂದಿಗೆ ಮಾನವ ಕಾಣುವುದರೊಂದಿಗೆ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡುವುದು ಮುಖ್ಯ ಉದ್ದೇಶ.

ಅದರೊಂದಿಗೆ ಪರಿವರ್ತನ ಚಾರೀಟೇಬಲ್ ಟ್ರಸ್ಟ್ 2016 ರಿಂದ ಮಂಗಳೂರಿನಲ್ಲಿ ಮಂಗಳಮುಖಿಯರ ಸರ್ವತೋಮೂಖ ಅಭಿವೃದ್ಧಿಗಾಗಿ, ಅದರೊಂದಿಗೆ ಅವರಿಗೆ ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಬದುಕುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಹಲವಾರು ರೀತಿಯ ಯೋಜನೆಗಳನ್ನು ಹಾಕಿಕೊಂಡಿದೆ. ಪರಿವರ್ತನ ಚಾರೀಟೇಬಲ್ ಟ್ರಸ್ಟ್ ಮಂಗಳಮುಖಿಯರಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದ್ದು, ಸಮಾಜದಲ್ಲಿ ಅವರಿಗೆ ಆಗುವ ಸಮಸ್ಯೆಗಳಿಗೆ ಪ್ರತಿಯೊಬ್ಬ ಮಂಗಳಮುಖಿಯರಿಗೆ ಆಧಾರ್ ಕಾರ್ಡ್ ನೀಡುವ ಸಲುವಾಗಿ ವಿಶೇಷ ಅಭಿಯಾನ ನಡೆಸಿದೆ. ಅದರಂತೆ ನಗರದಲ್ಲಿ ವಾಸವಿರುವ 40 ಕ್ಕೂ ಅಧಿಕ ಮಂಗಳ ಮುಖಿಯರು ಆಧಾರ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಟ್ರಸ್ಟಿನ ಸಹಕಾರದೊಂದಿಗೆ 5 ಮಂದಿ ಮಂಗಳಮುಖಿಯರು ಕೌಶಲ್ಯ ಅಭಿವೃದ್ಧಿಯ ತರಬೇತಿಯನ್ನು ಕೆಪಿಟಿಯಲ್ಲಿ ಎಪ್ರಿಲ್ 1 ರಿಂದ ಪಡೆಯಲಿದ್ದು, ಇನ್ನೂ 7 ಮಂದಿ ಮಂಗಳಮುಖಿಯರು ಬ್ಯೂಟಿಶಿಯನ್ ತರಬೇತಿಯನ್ನು ಪಡೆಯಲಿದ್ದಾರೆ.

ಮಾರ್ಚ್ 17 ಮತ್ತು 18 ರಂದು ಬಂಟ್ವಾಳದಲ್ಲಿ ಜರುಗಿದ ಸ್ವ-ಉದ್ಯೋಗ ತರಬೇತಿಯಲ್ಲಿ 10 ಮಂದಿ ಮಂಗಳಮುಖಿಯರು ಭಾಗವಹಿಸದ್ದಾರೆ. ಮಂಗಳಮುಖಿಯರನ್ನು ಸಮಾಜದಲ್ಲಿ ಸ್ವಾವಲಂಬಿಗಳಾಗಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದ್ದು, ಅವರಿಗೆ ಉತ್ತಮವಾದ ಉದ್ಯೋಗವನ್ನು ದೊರಕಿಸಿಕೊಡುವುದರೊಂದಿಗೆ ಅವರ ಜೀವನವನ್ನು ಸಮಾಜದಲ್ಲಿ ಗೌರವಯುತವಾಗಿ ನಡೆಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಟ್ರಸ್ಟ್ ಪ್ರಯತ್ನಿಸುತ್ತಿದೆ.  ಸಮಾಜದಲ್ಲಿ ಅವರು ಭಿಕ್ಷೆ ಬೇಡುವುದರಿಂದ ಹಲವಾರು ರೀತಿಯ ಶೋಷಣೆಗೆ ಒಳಗಾಗುವುದರಿಂದ ಕೆಲವು ಬಾರಿ ಹಲ್ಲೆಗೊಳಗಾಗುವುದಲ್ಲದೆ, ಅವರಿಗೆ ಬೆದರಿಸಿ ಅವರುಗಳ ಹಿರಿಯ ಸದಸ್ಯರಿಂದ ಹಣವಸೂಲಿ ಕೂಡ ನಡೆಯುತ್ತಿದೆ.

ನಮ್ಮ ದೇಶದಲ್ಲಿ ನಾವು ತಂದೆಯಂದಿರ ದಿನ, ತಾಯಂದಿರ ದಿನ, ಮಕ್ಕಳ ದಿನ, ಪ್ರೇಮಿಗಳ ದಿನವನ್ನು ಆಚರಿಸುತ್ತೇವೆ ಆದರೆ ಎಂದಿಗೂ ಮಂಗಳಮುಖಿಯರ ದಿನವನ್ನು ಆಚರಿಸುತ್ತಿಲ್ಲ ಆದ್ದರಿಂದ ಅವರ ದಿನಾಚರಣೆಯನ್ನು ಕೂಡ ಆಚರಿಸುವಂತಾಗಬೇಕು. ಇದರೊಂದಿಗೆ ಅವರನ್ನೂ ಕೂಡ ಸಮಾಜ ಗುರುತಿಸುವುದರೊಂದಗೆ ಅವರಲ್ಲಿ ಇರುವ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುವಂತಾಬೇಕು.  ನಮ್ಮ ದೃಷ್ಟಿಕೋನ ಬದಲಾಗದೆ ಇರದ ಕಾರಣ ಮಂಗಳಮುಖಿಯರು ವಿದ್ಯಾರ್ಥಿಗಳೊಂದಿಗೆ ಅಥವಾ ಸಮಾಜದಲ್ಲಿ ಬೆರೆಯಲು ಅವಕಾಶಗಳು ಸಿಗುವುದಿಲ್ಲ.  ಸಮಾಜ ಸೇವೆಯಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮಂಗಳಮುಖಿಯರ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪರಿವರ್ತನ ಚಾರೀಟೇಬಲ್ ಟ್ರಸ್ಟ್ ಮೂಲಕ ಕಾಲೇಜಿನ ಬಿಎಸ್ ಡಬ್ಲ್ಯೂ ಮತ್ತು ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಸಮಾಜದಲ್ಲಿ ಮಂಗಳಮುಖಿಯರ ಕುರಿತಾಗಿ ಇರುವ ದೃಷ್ಟಿಕೋನ ಬದಲಾಗುವುದು. ವಿದ್ಯಾರ್ಥಿಗಳಿಗೆ ಮಂಗಳಮುಖಿಯರ ಕುರಿತು ವಿಶೇಷ ತರಬೇತಿ ಯೋಜನೆಯಲ್ಲಿ ಮಂಗಳಮುಖಿಯರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದುವರೆಗೆ ಅವರ ದಿನಾಚರಣೆಯನ್ನು ಯಾರು ಆಚರಿಸಿಲ್ಲ ಆದರೆ ಈ ವರುಷದಿಂದ ಪ್ರತಿ ವರ್ಷವೂ ಕೂಡ ಅವರ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಸಮಾಜ ಅವರನ್ನು ಗುರುತಿಸುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ.

ಮಂಗಳಮುಖಿಯರ ದಿನವನ್ನು ಆಚರಿಸುವುದರೊಂದಿಗೆ ಸಮಾಜಸೇವಾ ವಿದ್ಯಾರ್ಥಿಗಳೊಂದಿಗೆ, ಸಾಮಾನ್ಯ ಜನತೆ ಹಾಗೂ ಸರಕಾರಿ ಅಧಿಕಾರಿಗಳಲ್ಲಿ  ಮಂಗಳಮುಖಿಯರ ಕುರಿತು ಇರುವ ದೃಷ್ಟಿಕೋನ ಬದಲಾಯಿಸುವುದರೊಂದಿಗೆ ಅವರುಗಳೊಂದಿಗೆ ಸಂವಾದವನ್ನು ಆಯೋಜಿಸಿ ಅವರ ಅವಶ್ಯಕತೆಗಳ ಕುರಿತು ಹೊಸ ಯೋಜನೆಗಳನ್ನು ರೂಪಿಸುವುದು ಪ್ರಮುಖ ಉದ್ದೇಶವಾಗಿದೆ.

ಸುದ್ದಿಗೋಷ್ಟಿಯಲ್ಲಿ ಅನುಸೂಯ ಶೆಣಯ (ಸಹಾಯಕ ಉಪನ್ಯಾಸಕರು ಮತ್ತು ಸಂಘಟಕರು ಸಹಯೋಗ ವೇದಿಕೆ), ಶ್ರೀನಿಧಿ (ಕೋಶಾಧಿಕಾರ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್), ಸಂಜನ (ಕಾರ್ಯದರ್ಶಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್) ಉಪಸ್ಥಿತರಿದ್ದರು.

 


Spread the love

Exit mobile version