ಮಿಡತೆ ಹಾವಳಿ – ರೈತರಿಗೆ ಸಲಹೆ

Spread the love

ಮಿಡತೆ ಹಾವಳಿ – ರೈತರಿಗೆ ಸಲಹೆ
ಮಂಗಳೂರು : ಇತ್ತೀಚೆಗೆ ಮಿಡತೆಕೀಟ ಹಾವಳಿ ದಕ್ಷಿಣಕನ್ನಡಜಿಲ್ಲೆಯ ಕೆಲವು ಪ್ರದೇಶಗಳಲ್ಲಿ  ಕಾಣಿಸಿಕೊಂಡಿರುತ್ತದೆ ಹಾಗೂ ಕಾಣಿಸಿಕೊಂಡ ವಿಡತೆಗಳು ಮರುಭೂವಿಯ ಲೋಕಸ್ಟಗಳಾಗಿರುವುದಿಲ್ಲ. ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ ಅವುಗಳ ನಿಯಂತ್ರಣಕ್ಕಾಗಿಕೀಟವು ಬೆಳೆಗಳಲ್ಲಿ ಕಂಡುಬಂದಲ್ಲಿ, ಡ್ರ್ರಮ್‍ಅಥವಾ ಪಾತ್ರೆಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನುಇತರೆಡೆಗೆಓಡಿಸಬಹುದು.
ಬೇವಿನ ಮೂಲದ ಕೀಟನಾಶಕಗಳನ್ನು (0.15% ಇ.ಸಿ @3ಎಂ.ಎಲ್/ಲೀ) ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದುಕಡಿಮೆಯಾಗುತ್ತದೆ.ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದಕೀಟವನ್ನು ಬೇರೆಡೆಗೆಓಡಿಸಬಹುದು.
ಕೀಟವು ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶ ಕನಿಷ್ಟ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು.ಮಿಡತೆ ಹಗಲಿನಲ್ಲಿ ಚಲಿಸಿ ರಾತ್ರಿವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದಟ್ರ್ಯಾಕ್ಟರ್ ಮೌಂಟೆಡ್‍ಜೆಟ್ ಸ್ಪ್ರೇಯರ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು.ಆದರೆ ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.
ಬೆಳೆಯ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆಕಂಡುಬಂದಲ್ಲಿಕೀಟನಾಶಕಕ್ಲೊರೋಪೈರಿಪಾಸ್ 20% ಎ.ಸಿ ಪ್ರತೀ ಹೆಕ್ಟರ್‍ಗೆ1.2 ಲೀ, ಕೀಟನಾಶಕಕ್ಲೊರೋಪೈರಿಪಾಸ್ 50% ಇ.ಸಿ. ಪ್ರತೀ ಹೆಕ್ಟರ್‍ಗೆ480 ಎಂ.ಎಲ್, ಕೀಟನಾಶಕಡೆಲ್ಟಮೆಥ್ರಿನ್ 2.8 ಇ.ಸಿಪ್ರತಿ ಹೆಕ್ಟೇರ್‍ಗೆ450 ಎಂ.ಎಲ್, ಕೀಟನಾಶಕಫಿಪ್ರೋನಿಲ್ 5% ಎಸ್.ಸಿಪ್ರತಿ ಹೆಕ್ಟೇರ್‍ಗೆ125 ಎಂ.ಎಲ್, ಕೀಟನಾಶಕಫಿಪ್ರೋನಿಲ್ 2.8% ಇ.ಸಿಪ್ರತಿ ಹೆಕ್ಟೇರ್‍ಗೆ225 ಎಂ.ಎಲ್, ಕೀಟನಾಶಕಲಾಮ್ಡಾಸಹಲೋಥ್ರಿನ್ 5.0% ಇ.ಸಿ.ಪ್ರತಿ ಹೆಕ್ಟೇರ್‍ಗೆ400 ಎಂ.ಎಲ್, ಕೀಟನಾಶಕಲಾಮ್ಡಾಸಹಲೋಥ್ರಿನ್ 10.0% ಡಬ್ಲ್ಯೂಪಿಪ್ರತಿ ಹೆಕ್ಟೇರ್‍ಗೆ200 ಗ್ರಾಂ, ಕೀಟನಾಶಕಮಲಾಥಿಯಾನ್ 50% ಇ.ಸಿ.ಪ್ರತಿ ಹೆಕ್ಟೇರ್‍ಗೆ1.85 ಲೀ, ಕೀಟನಾಶಕಮಲಾಥಿಯಾನ್ 25% ಡಬ್ಲ್ಯೂಪಿಪ್ರತಿ ಹೆಕ್ಟೇರ್‍ಗೆ3.7 ಕಿ.ಗ್ರಾಂ ಕೀಟನಾಶಕಗಳನ್ನು ಬಳಸಿ ಹತೋಟಿ ಮಾಡಬಹುದು ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love