Home Mangalorean News Kannada News ಮಿತ್ರ ಪಕ್ಷದ ಅಭ್ಯರ್ಥಿ ಮಿಥುನ್ ರೈ ಗೆಲುವು ಖಚಿತ: ಮಹಮ್ಮದ್ ಕುಂಞ

ಮಿತ್ರ ಪಕ್ಷದ ಅಭ್ಯರ್ಥಿ ಮಿಥುನ್ ರೈ ಗೆಲುವು ಖಚಿತ: ಮಹಮ್ಮದ್ ಕುಂಞ

Spread the love

ಮಿತ್ರ ಪಕ್ಷದ ಅಭ್ಯರ್ಥಿ ಮಿಥುನ್ ರೈ ಗೆಲುವು ಖಚಿತ: ಮಹಮ್ಮದ್ ಕುಂಞ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಹೈಕಮಾಂಡ್ ಅಧೇಶದಂತೆ ಚುನಾವಣೆ ಘೋಷಣೆ ಆಗುವ ಮೊದಲೇ ತಾಲೂಕು ಮಟ್ಟದಲ್ಲಿ ವಿವಿಧ ತಂಡಗಳನ್ನು ರಚಿಸಿ ಜಂಟಿಯಾಗಿ ಜಿಲ್ಲೆಯ ಮೂಲೆ ಮೂಲೆಗಳಿಗೆ ಚುನಾವಣಾ ಪ್ರಚಾರವನ್ನು ಕೈಗೊಂಡಾಗ ಕಳೆದ 10 ವರುಷಗಳಿಂದ ಜಿಲ್ಲೆಯ ಸಂಸದರು ಅವರ ಕಾರ್ಯ ವೈಖರಿ ಹಾಗೂ ಯಾವುದೇ ಅಭಿವೃದ್ದ್ದಿ ಮಾಡದ ಬಗ್ಗೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ “ಮೋದಿ ಹವಾ” ಸಂಪೂರ್ಣವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ. ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ ಬೆಳ್ತಂಗಡಿಯಲ್ಲಿ ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿಯೇ ಜಿಜೆಪಿ ಗೆಲ್ಲಲು ಕಾರಣವಾಗಿತ್ತು. ಆದರೆ ಈ ಬಾರಿ ಸ್ವತ: ರಾಜ್ಯ ರಾಜ್ಯದ ಮುಖ್ಯ ಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಹಾಗೂ ಕಾಂಗ್ರಸ್ ಮುಖಂಡ ಡಿ.ಕೆ ಶಿವಕುಮಾರ್ ರವರು ಎಡೆಬಿಡದ ಕಾರ್ಯಕ್ರಮವಿದ್ದರೂ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಜಿಲ್ಲೆಯ ವಿವಿಧ ಸಮುದಾಗಳ ಸಭೆ ನಡೆಸಿ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲು ಶ್ರಮ ವಹಿಸಿದ್ದಾರೆ. 9 ತಿಂಗಳ ಸಾಧನೆ ಮತ್ತು ನಳಿನ್ನ ಕುಮಾರ್ ರವರ ವೈಫಲ್ಯತೆಯಿಂದ ಜನ ಸಾಮಾನ್ಯರು ಸಂಪೂರ್ಣವಾಗಿ ಮಿಥುನ್ ರೈ ರವರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಮಂಗಳೂರಿಗೆ ಬೇಟಿ ನೀಡಿದ ಸಂಧರ್ಭದಲ್ಲಿ ಹೊರ ಜಿಲ್ಲೆಗಳಾದ ಚಿಕ್ಕ ಮಂಗಳೂರು, ಉಡುಪಿ, ಕಾಸರಗೋಡು, ಮಡಿಕೇರಿಗಳಿಂದ ಜನರನ್ನು ಹಣ ಕೊಟ್ಟು ಕರೆ ತಂದಿದ್ದು ಬಿಜೆಪಿಯ ಶÀಕ್ತಿ ಎಷ್ಟು ಇದೆ ಎಂದು ಸ್ಪಷ್ಟವಾಗಿದೆ. 5 ವರುಷಗಳ ಹಿಂದೆ ಮೋದಿಯವರು ರಾಮ ಮಂದಿರ ಹೆಸರಿನಲ್ಲಿ ಮತ ಕೇಳಿದ್ದು ಈ ಸಲ ಭಾರತದ ಗಡಿ ರಕ್ಷಣೆಗೆ ಪಾಕಿಸ್ತಾನದ ಹೆಸರಿನಲ್ಲಿ ಮತ ಯಾಚಿಸುವುದು ನಾಚಿಕೆ ಗೇಡಿನ ಸಂಗತಿ. ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಗುಂಪುಗಾರಿಕೆ ತೀವ್ರ ಗೊಂಡಿದ್ದು, ಗ್ರಾಮೀಣ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಭ್ರಮೆ ನಿರಾಶೆಗೊಂಡಿದ್ದಾರೆ ಹಾಗೂ ನಳಿನ್ ಕುಮಾರ್ ಕಟೀಲಿಗೆ ಪಕ್ಷದವರೆ ಸೋಲಿಸಲು ಸಿದ್ದರಾಗಿದ್ದಾರೆ. ಅದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಸೋಲು ಖಚಿತ ಹಾಗೂ ಮಿಥುನ್ ರೈ ಸಂಸದರಾಗಿ ಆಯ್ಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಷ್ಟ್ರ ಮಟ್ಟದಲ್ಲಿ ರಾಹುಲ್‍ಗಾಂದಿ ಹಾಗೂ ದೇವೆಗೌಡರ ನಾಯಕತ್ವದಲ್ಲಿ ಸರಕಾರ ರಚಿಸುವುದು ನಿಶ್ಚಿತವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ಯವರು ತಿಳಿಸಿದ್ದಾರೆ.


Spread the love

Exit mobile version