Home Mangalorean News Kannada News ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ವಿದ್ಯಾರ್ಥಿಯ ಬಂಧನ

ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ವಿದ್ಯಾರ್ಥಿಯ ಬಂಧನ

Spread the love
RedditLinkedinYoutubeEmailFacebook MessengerTelegramWhatsapp

ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ವಿದ್ಯಾರ್ಥಿಯ ಬಂಧನ

ಮಂಗಳೂರು: ನಗರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಫಾ ಮೈಕಲ್ ಸಾಂತುಮಾಯೆರ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ವಿದ್ಯಾರ್ಥಿ ಪಾಂಡೇಶ್ವರ ಮಹಮ್ಮದ್ ಶಾಹನವಾಜ್ ಬಂಧಿಸುವಲ್ಲಿ ಬಂದರು ಠಾಣಾ ಪೋಲಿಸರು ಯಶಸ್ವಿಯಾಗಿದ್ದಾರೆ,

ಸೋಮವಾರ ಸಂಜೆ 5 ಗಂಟೆ ಹೊತ್ತಿಗೆ ಬಂದರು ಇನ್ಸ್ ಪೆಕ್ಟರ್ ಶಾಂತಾರಾಂ ನೇತೃತ್ವದಲ್ಲಿ ಪೋಲಿಸರು ಶಾಹನವಾಜ್ ನ್ನು ಪಂಪ್ ವೆಲ್ ನಲ್ಲಿ ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿದ್ದ ಈತ ಕೇರಳದ ಕಡೆಗೆ ಹೋಗಲು ಯೋಜನೆ ರೂಪಿಸಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.

ಶಾಹನವಜ್ ಅಕ್ಟೋಬರ್ 20 ರಂದು ಕಾಲೇಜಿನ ಹಾಜರಾತಿ ವಿಷಯಕ್ಕೆ ಸಂಬಧಿಸಿ ಕರ್ತವ್ಯದಲ್ಲಿದ್ದ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾಗಿದ್ದ ಪ್ರಾಂಶುಪಾಲರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಘಟನೆಗೆ ಸಂಬಂಧಿಸಿ ಕೆಲವು ಸಂಘಟನೆಗಳಿಂದ ಖಂಡನೆಗಳು ವ್ಯಕ್ತವಾಗಿದ್ದವು. ಮಾತ್ರವಲ್ಲದೆ ವಿದ್ಯಾರ್ಥಿಯ ಬಂಧನಕ್ಕೆ ಒತ್ತಾಯಿಸಿದ್ದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version