ಮಿಲಾಗ್ರಿಸ್ ಕ್ಯಾಥೆಡ್ರಲ್ ನೂತನ ಧರ್ಮಗುರುಗಳಾಗಿ ವ. ಲೋರೆನ್ಸ್ ಡಿಸೋಜಾ ಅಧಿಕಾರ ಸ್ವೀಕಾರ

Spread the love

ಮಿಲಾಗ್ರಿಸ್ ಕ್ಯಾಥೆಡ್ರಲ್ ನೂತನ ಧರ್ಮಗುರುಗಳಾಗಿ ವ. ಲೋರೆನ್ಸ್ ಡಿಸೋಜಾ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ನೂತನ ಪ್ರಧಾನ ಧರ್ಮಗುರುಗಳಾಗಿ ಉಡುಪಿ ಕೆಥೊಲಿಕ್ ಎಜ್ಯುಕೇಶನ್ ಸೊಸೈಟಿ ಇದರ ಕಾರ್ಯದರ್ಶಿ ವಂ. ಡಾ. ಲೊರೆನ್ಸ್ ಡಿಸೋಜಾ ಅವರು ಸೋಮವಾರ ಅಧಿಕಾರವನ್ನು ಸ್ವೀಕರಿಸಿದರು.

ಉಡುಪಿ ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಧರ್ಮಪ್ರಾಂತ್ಯದ ಕುಲಪತಿ ಹಾಗೂ ಉಡುಪ ಶೋಕ ಮಾತಾ ಇಗರ್ಜಿಯ ಧರ್ಮಗುರುಗಳಾದ ವಂ ವಲೇರಿಯನ್ ಮೆಂಡೊನ್ಸಾ ಅವರು ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ನೂತನ ಧರ್ಮಗುರುಗಳಿಗೆ ಪವಿತ್ರ ಬೈಬಲ್, ಚರ್ಚಿನ ಆಡಳಿತ ಸಂಬಂಧಿ ಲೆಕ್ಕದ ಪುಸ್ತಕಗಳು, ಹಾಗೂ ಚರ್ಚಿನ ಕೀಲಿಕೈಯನ್ನು ನೀಡುವುದರ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನೇರವೇರಿಸಲಾಯಿತು.

ಈ ವೇಳೆ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ, ಮೂಡುಬೆಳ್ಳೆ ಚರ್ಚಿನ ವಂ. ಕ್ಲೆಮಂಟ್ ಮಸ್ಕರೇನ್ಹಸ್, ಧರ್ಮಪ್ರಾಂತ್ಯದ ಎಸ್ಟೆಟ್ ಮ್ಯಾನೇಜರ್ ವಂ. ಹೆನ್ರಿ ಮಸ್ಕರೇನ್ಹಸ್, ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ನಿರ್ಗಮನ ಧರ್ಮಗುರು ವಂ ಸ್ಟ್ಯಾನಿ ಬಿ ಲೋಬೊ, ಸಹಾಯಕ ಧರ್ಮಗುರು ವಂ. ರೊಲ್ವೀನ್ ಆರಾನ್ಹಾ, ಅತಿಥಿ ಧರ್ಮಗುರುಗಳಾದ ವಂ ರೋಯ್ಸನ್ ಫೆರ್ನಾಂಡಿಸ್, ವಂ ವಿಜಯ್ ಡಿಸೋಜಾ, ವಂ. ವಿನ್ಸೆಂಟ್ ಕುವೆಲ್ಲೊ, ವಂ. ರೊನ್ಸನ್, ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಡಾ. ನೇರಿ ಕರ್ನೇಲಿಯೋ, ಹಾಗೂ ನೂರಾರು ಮಂದಿ ¨sಕ್ತಾದಿಗಳು ಭಾಗವಹಿಸಿದ್ದರು.

ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ನಿರ್ಗಮನ ಧರ್ಮಗುರು ವಂ ಸ್ಟ್ಯಾನಿ ಬಿ ಲೋಬೊ ಅವರು ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರುಗಳಾಗಿ ವರ್ಗಾವಣೆಗೊಂಡಿದ್ದು, ಹೆಚ್ಚುವರಿಯಾಗಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿಯಾಗಿ ನೇಮಕಗೊಂಡಿದ್ದಾರೆ. ಹಾಗೂ ಸಹಾಯಕ ಧರ್ಮಗುರುಗಳಾಗಿದ್ದ ವಂ. ರೊಲ್ವೀನ್ ಆರಾನ್ಹಾ, ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರುವಾಗಿ ವರ್ಗಾವಣೆಗೊಂಡಿದ್ದಾರೆ.


Spread the love