ಮಂಗಳೂರು: ನಗರದ ಹೃದಯ ಭಾಗದ ಕ್ರೈಸ್ತ ಸಮುದಾಯದ ಪುರಾತನ ಮಿಲಾಗ್ರಿಸ್ ಚರ್ಚಿನಲ್ಲಿ ಬಾಂಬಿಡಲಾಗಿದೆ ಎಂಬ ಸುದ್ದಿ, ಸುದ್ದಿಯಿಂದ ಕಂಗಾಲಾದ ಚರ್ಚು ಆಡಳಿತ ಮಂಡಳಿ. ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಹಾಗೂ ಪೋಲಿಸರ ತಂಡ. ತಂಡದಿಂದ ಚರ್ಚಿನ ಮೂಲೆ ಮೂಲೆಯಲ್ಲಿ ಶೋಧ. ಕೊನೆಗೂ ಪತ್ತೆಯಾದ ಬಾಂಬ್, ಬಾಂಬ್ ನಿಷ್ಕ್ರೀಯಗೊಳಿಸಿದ ಬಾಂಬ್ ನಿಷ್ಕ್ರೀಯ ದಳ. ಅಲ್ಲಿಗೆ ಎಲ್ಲರಲ್ಲೂ ಸಮಾಧಾನದ ನಿಟ್ಟುಸಿರು.
ಇದು ನಡೆದಿರುವುದು ಶುಕ್ರವಾರ ಮಧ್ಯಾಹ್ನ ನಗರದ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಚರ್ಚಿನಲ್ಲಿ. ಏಪ್ರಿಲ್ 20 ರಂದು ನಗರದ ಪೋಲಿಸರಿಗೆ ಚರ್ಚಿನಲ್ಲಿ ಬಾಂಬ್ ಇಡಲಾಗುವುದು ಎಂದು ಒಂದು ಫೋನ್ ಕರೆ ಬಂದಿರುತ್ತದೆ. ಕೂಡಲೇ ಚರ್ಚಿನ ಸುತ್ತ ಭಧ್ರತೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದು, ಏಪ್ರಿಲ್ 22 ರಂದು ಪೋಲಿಸರು ಮತ್ತೆ ಫೋನ್ ಕರೆ ಸ್ವೀಕರಿಸಿದ್ದು, ಕೂಡಲೇ ಸ್ಥಳಕ್ಕೆ ಪಾಂಡೇಶ್ವರ ಪೋಲಿಸರು ತಮ್ಮ ತಂಡದೊಂದಿಗೆ ಆಗಮಿಸಿ ಪರೀಶೀಲನೆ ಆರಂಭಿಸಿದರು.
ಪಾಂಡೇಶ್ವರ ಪೋಲಿಸ್ ಠಾಣೆಯ ದಿನಕರ್ ಶೆಟ್ಟಿ ಮತ್ತು ಅವರ ತಂಡ ಚರ್ಚಿನಲ್ಲಿ ಹುಡುಕಾಟ ನಡೆಸಿತು. ಕೊನೆಗೂ ಹುಡುಕಾಟದ ಪರಿಣಾಮ ಬಾಂಬ್ ಇರಿಸಿದ ಪ್ಯಾಕೆಟ್ ಚರ್ಚಿನ ಒಳಗೆ ಪತ್ತೆಯಾಯಿತು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯ ದಳದ ನೇತ್ರತ್ವದಲ್ಲಿ ಬಾಕ್ಸ್ ತೆರೆದಾಗ ಅದರಲ್ಲಿ ಕಾಣಸಿಕ್ಕಿದು ಇಲೆಕ್ಟ್ರೀಕ್ ತಂತಿಗಳ ರಾಶಿ ಕೊನೆಗೂ ಸ್ಥಳದಲ್ಲಿದ್ದ ಎಲ್ಲರೂ ಸಮಾಧಾನದ ನಿಟ್ಟಿಸಿರು ಬಿಟ್ಟರು ಕಾರಣ ಇದೊಂದು ಪೋಲಿಸರಿಂದ ನಡೆಸಿದ ಅಣುಕು ಕಾರ್ಯಾಚರಣೆಯಾಗಿತ್ತು ಎನ್ನವುದು ತಿಳಿದಾಗ ಎಲ್ಲರೂ ಒಮ್ಮೆಲೆ ಆಶ್ಚರ್ಯವಲ್ಲದೆ ಸಮಾಧಾನಪಟ್ಟರು.
ಈ ಕುರಿತು ಮ್ಯಾಂಗಲೋರಿಯನ್ ನೊಂದಿಗೆ ಮಾತನಾಡಿದ ಎಸ್ ಐ ದಿನಕರ್ ಶೆಟ್ಟಿ ಅವರು ಇದೊಂದು ನಗರದಲ್ಲಿ ಭಧ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸಿ ಅಣಕು ಕಾರ್ಯಾಚರಣೆಯಾಗಿದ್ದು, ಜಿಲ್ಲೆಯಲ್ಲಿ ಭಧ್ರತೆಯ ಮುನ್ನಚ್ಚರಿಕೆ ಕೈಗೊಳ್ಳಲು ಸಾಧ್ಯ. ಇಂತಹ ಅಣಕು ಕಾರ್ಯಚರಣೆಯನ್ನು ಆರು ತಿಂಗಳಿಗೊಮ್ಮೆ ನಗರದ ಪ್ರಮುಖ ಸ್ಥಳಗಳಲ್ಲಿ ನಡೆಸಲಾಗುತ್ತಿದ್ದು, ಯಾವುದೇ ಅನೀರೀಕ್ಷಿತ ಘಟನೆಗಳು ನಡೆದಾಗ ಜನರು ಯಾವ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯ ಎನ್ನುವ ಮಾಹಿತಿ ನೀಡಲಾಗುತ್ತದೆ ಎಂದರು.