ಮೀನುಗಾರರ ಮನೆಯಲ್ಲಿ ಫಿಶ್ ಕರಿ ಮತ್ತು ನೀರು ದೋಸೆ ಸವಿದ ರಾಹುಲ್ ಗಾಂಧಿ
ಉಡುಪಿ: ಜನಾಶೀರ್ವಾದ ಯಾತ್ರೆಯ ಭಾಗವಾಗಿ ಉಡುಪಿಗೆ ಭೇಟಿ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೀನುಗಾರರ ಕುಟುಂಬಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದರು.
ಮಂಗಳವಾರ ಬೆಳಗ್ಗೆ ಉಡುಪಿಗೆ ಆಗಮಿಸಿದ ರಾಹುಲ್ ಗಾಂಧಿ ಎರ್ಮಾಳು ತೆಂಕ ಹೈಸ್ಕೂಲ್ಗೆ ಭೇಟಿ ನೀಡಿ ಕೆಲ ಕಾಲ ಮಕ್ಕಳೊಂದಿಗೆ ಕಾಲ ಕಳೆದರು. ಆ ನಂತರ ಮೀನುಗಾರರ ಮನೆಗಳಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ಸಮಯದಲ್ಲಿ ನಿಮ್ಮ ಕುಟುಂಬದ ದಿನದ ಆದಾಯ ಎಷ್ಟು, ಸರ್ಕಾರದ ಯೋಜನೆಗಳು ನಿಮಗೆ ತಲುಪಿದೆಯಾ ಎಂದು ಪ್ರಶ್ನಿಸಿದರು.
ಮೀನುಗಾರರು ಒಂದು ತಿಂಗಳಿಗೆ 3-4 ಸಾವಿರ ರೂ. ಆದಾಯ ಇದೆ. ಇದರಿಂದ ಜೀವನ ನಡೆಸುವುದು ಬಹಳ ಕಷ್ಟವಿದೆ. ಸರ್ಕಾರ ನಮಗೋಸ್ಕರ ವಿಶೇಷ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು. ರಾಹುಲ್ ಗಾಂಧಿ ಮೀನುಗಾರರ ಮನೆಯಲ್ಲಿ ಫಿಶ್ ಕರಿ ಮತ್ತು ನೀರು ದೋಸೆ ಸವಿದರು.