ಮೀನುಗಾರಿಕಾ ಕಾಲೇಜಿನಲ್ಲಿ ಗೋಲ್ಡನ್ ಜೂಬಿಲಿ ಬ್ಯಾಟ್ಮಿಂಟನ್ ಟೂರ್ನಮೆಂಟ್
ಮಂಗಳೂರು : ನಗರದ ಮೀನುಗಾರಿಕಾ ಕಾಲೇಜಿನಲ್ಲಿ ಮಂಗಳೂರಿನಲ್ಲಿ ಗೋಲ್ಡನ್ ಜೂಬಿಲಿಯ ಅಂಗವಾಗಿ ನವೆಂಬರ್ 22 ನೇ ಗುರುವಾರದಂದು ದ.ಕ. ಜಿಲ್ಲಾ ಮಟ್ಟದ ಫಿಶ್ಕೋ ಕಪ್ ಬ್ಯಾಟ್ಮಿಂಟನ್ ಟೂರ್ನಮೆಂಟ್ ನಡೆಸಲಾಯಿತು. ದೈಹಿಕ ಶಿಕ್ಷಣ ವಿಭಾಗದಲ್ಲಿ ನಡೆಸಲಾದ
ಯುವ ಪೀಳಿಗೆಗಳು ಇಂತಹ ಆಟೋಟಗಳಲ್ಲಿ ಯಥೇಚ್ಚವಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳಿಗೆ ಪೆÇ್ರೀತ್ಸಾಹ ನೀಡಬೇಕಿದೆ ಮತ್ತು ಆರೋಗ್ಯ ದೃಷ್ಟಿಯಿಂದ ನಿತ್ಯ ಅಭ್ಯಸಿಸಿದರೆ ಮನುಷ್ಯ ಸಂತೋಷವಾಗಿರಲು ಸಾಧ್ಯವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕ್ರೀಡೆಗಳ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತಾ ಯುವಜನತೆ ಲಭ್ಯವಿರುವ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಹೆಚ್ಚಿನ ಸಾಧನೆಗೆ ಮುಂದಾಗಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿ, ಗೋಲ್ಡನ್ ಜೂಬಿಲಿಯ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಲಾಗುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಮೀನುಗಾರಿಕಾ ಕಾಲೇಜು ಉತ್ತಮ ಒಳಾಂಗಣ ಬ್ಯಾಟ್ಮಿಂಟನ್ ಕೋರ್ಟು ಮತ್ತು ಈಜುಕೊಳ ಹೊಂದಿದೆ ಎಂದು ತಿಳಿಸಿದರು. ಸ್ಪರ್ಧಾಳುಗಳಿಗೆ ಶುಭ ಹಾರೈಸಿ ಕಾಲೇಜಿನಲ್ಲಿ ನಡೆಸಲಾಗುವ ಇಂತಹ ಕಾರ್ಯಚಟುವಟಿಕೆಗಳಿಗೆ ಯುವಜನಾಂಗ ಹೆಚ್ಚು ಹೆಚ್ಚಾಗಿ ಭಾಗವಿಹಿಸಬೇಕೆಂದು ಕರೆ ನೀಡಿದರು.
ಕಾಲೇಜಿನ ಇನ್ನೋರ್ವ ಹಳೇ ವಿದ್ಯಾರ್ಥಿ ಬೆಂಗಳೂರಿನ ನೋವಾ ಬ್ಯಾಟ್ಮಿಂಟನ್ ಅಕಾಡೆಮಿಯ ಕ್ರೀಡಾಪಟು ದಿನೇಶ್ ಕೆ.ಎನ್. ಮತ್ತು ದ.ಕ. ಜಿಲ್ಲೆಯ ಬ್ಯಾಟ್ಮಿಂಟನ್ ಅಸೋಸಿಯೇಶನ್‍ನ ಕಾರ್ಯದರ್ಶಿ ಐವಾನ್ ಪತ್ರಾವ್ ಗೌರವಾನ್ವಿವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಿಭಾಗದ ಮುಖ್ಯಸ್ಥ ಮನೋಜ್ ಕುಮಾರ್ ಸ್ವಾಗತಿಸಿದರು. ಡಾ| ಗಿರೀಶ್ ಎಸ್.ಕೆ. ವಂದಿಸಿದರು. ಪೂರ್ಣಶ್ರೀ ಎಂ.ಟಿ. ಕಾರ್ಯಕ್ರಮ ನಿರೂಪಿಸಿದರು