ಮೀನುಗಾರಿಕಾ ಕಾಲೇಜಿನಲ್ಲಿ 3 ದಿನಗಳವರೆಗೆ ಫಿಶ್ಕೋ ಫೆಸ್ಟಿವಲ್ 

Spread the love

ಮೀನುಗಾರಿಕಾ ಕಾಲೇಜಿನಲ್ಲಿ 3 ದಿನಗಳವರೆಗೆ ಫಿಶ್ಕೋ ಫೆಸ್ಟಿವಲ್ 

ಮಂಗಳೂರು: ನಗರದ ಮೀನುಗಾರಿಕಾ ಮಹಾವಿದ್ಯಾಲಯವು 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್ ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ರವರು ಚಾಲನೆ ನೀಡಿದರು.

ಕಾಲೇಜಿನ ನುರಿತ ಪ್ರಾದ್ಯಾಪಕರು ವಿಶೇಷವಾದ ಸಂಶೋದನೆ ಮಾಡುವಲ್ಲಿ ನುರಿತರಾಗಿದ್ದರೂ ಸಹಾ ಮೀನುಗಾರಿಕೆಗೆ ಪೂರಕ ಸಂಶೋದನೆಗಳನ್ನು ಮಾಡುವ ಅಗತ್ಯತೆ ಇದೆ ಎಂದು ಅವರು ಹೇಳಿದರು. ಅಲ್ಲದೇ, ಶೈಕ್ಷಣಿಕವಾಗಿ ಮಾಹಿತಿ ರವಾನಿಸಲು ಎಲ್ಲಾ ಅದ್ಯಾಪಕ ವೃಂದದವರ ಜವಾಬ್ದಾರಿಯಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಸ ಆವಿಷ್ಕಾರದ ತಂತ್ರಜ್ಞಾನಗಳನ್ನು ತರಬೇತಿಯ ಮೂಲಕ ಮೀನುಗಾರರಿಗೆ ತಲುಪುವ ಕಾರ್ಯಗಳಾಗಬೇಕಿದೆ ಹಾಗೂ ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪುವಂತಾಗಬೇಕಿದೆಯೆಂದು ತಿಳಿಸಿದರು. ಈ ಸಂದರ್ಭದಲ್ಲಿ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿ ಯವರು ಗೋಲ್ಡನ್ ಜೂಬಿಲಿ ಕಟ್ಟಡ ನಿರ್ಮಿಸಲು ಸರ್ಕಾರದಿಂದ 8.0 ಕೋಟಿಯ ಸಹಾಯದ ಬೇಡಿಕೆ ಪತ್ರವನ್ನು ಸಚಿವರಿಗೆ ಸಲ್ಲಿಸಿದರು. ಪ್ರತ್ಯುತ್ತರವಾಗಿ ಸಚಿವರು ಮುಂದಿನ 50 ವರ್ಷಗಳವರೆಗೆ ಕಾಲೇಜಿಗೆ ಬೇಕಾಗುವ ಸವಲತ್ತನ್ನು ಸರ್ಕಾರದಿಂದ ಕೊಡಿಸುವ ಪ್ರಯತ್ನ ಮಾಡಿತ್ತೇನೆಂದು ಭರವಸೆ ನೀಡಿದರು.

50 ವರ್ಷ ತುಂಬಿದ ರಾಜ್ಯದ ಏಕೈಕ ಕಾಲೇಜು ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸುವ ಸಂದರ್ಭ ಅಂತರ್ ಕಾಲೇಜುಗಳ ಸಾಂಸ್ಕೃತಿಕ, ಸಾಹಿತ್ಯ ಮತ್ತು ಲಲಿತಕಲೆಗಳ ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವುದು. ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳೂ ಸಹಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೇರೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸ್ಪರ್ದೆಗಳಲ್ಲಿ ಪೈಪೆÇೀಟಿ ನಡೆಸುವುದು ಮತ್ತೊಂದು ವಿಶೇಷ. ಈ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ದೆಗಳಲ್ಲಿ ವಿಜೇತರಾಗಿ ಪ್ರಶಸ್ಥಿ ಗಳಿಸಿದರೆ ಮುಂದಿನ ವಿಜೇತರಿಗೆ ಆ ಪ್ರಶಸ್ತಿಯನ್ನು ವರ್ಗಾಯಿಸುವುದು ಸಾಂಪ್ರದಾಯಿಕವಾಗಿ ರೂಡಿಯಲ್ಲಿರುವುದು ಈ ಕಾಲೇಜಿನ ಇತಿಹಾಸ.

ವಿಜೃಂಬಣೆಯಿಂದ ಆಚರಿಸಲಾಗುವ ಈ ಫಿಶ್ಕೋ ಫೆಸ್ಟಿವಲ್ ವಿದ್ಯಾರ್ಥಿ ವೃಂದದವರಿಗೆ ಹಬ್ಬದ ವಾತಾವರಣದಂತೆ ಸೃಷ್ಟಿಯಾಗಿದೆ ಹಾಗೂ ಆಚರಣೆಯನ್ನು ಕಾಲೇಜಿನ ಸಭಾಂಗಣದಲ್ಲೇ ನಡೆಸುವುದರಿಂದ ಈ ಮತ್ಸ್ಯೋತ್ಸವಕ್ಕೆ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಪೆÇ್ರೀತ್ಸಾಹ ಮತ್ತು ಸಹಕಾರವಿದೆ ಎಂದು ಕಾಲೇಜಿನ ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮತ್ತು ಫಿಶ್ಕೋ ಫೆಸ್ಟಿವಲ್‍ನ ಪ್ರಚಾರಾಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ಪತ್ರಿಕೋದ್ಯಮಿಗಳ ಜೊತೆ ಹಂಚಿಕೊಂಡರು. . ಮೂರು ದಿನಗಳ ಕಾರ್ಯಕ್ರಮಗಳನ್ನು ನಡೆಸಲು ಕಾಲೇಜಿನ ಬೋದಕ ಮತ್ತು ಬೋದಕೇತರ ಸಿಬ್ಬಂದಿವರ್ಗದವರು ಕೈಜೋಡಿಸುವುದು ಫಿಶ್ಕೋ ಫೆಸ್ಟಿವಲ್‍ನ ವಿಶೇಷವಾಗಿದೆ.

ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳಾದ ಡಂ-ಛರಾಡ್, ರಸ ಪ್ರಶ್ನೆ, ಚರ್ಚಾ ಸ್ಪರ್ದೆ, ಆಶು-ಭಾಷಣ ಸ್ಪರ್ಧೆ, ಭಾವ ಗೀತೆ, ಚಲನಚಿತ್ರ ಗೀತೆ, ಸಮೂಹ ಗಾಯನ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಪಾಶ್ಚಿಮಾತ್ಯ ಸಂಗೀತ, ಸಮೂಹ ನೃತ್ಯ, ಭರತ ನಾಟ್ಯ, ಚಿತ್ರಕಲೆ, ರಂಗೋಲಿ, ಮೈಮ್, ಕೊಲಾಜ್, ಜೇಡಿ ಮಣ್ಣಿನ ಕಲಾಕೃತಿ ರಚನೆ, ವೈವಿದ್ಯಮಯ ಮನೋರಂಜನೆ, ರೇಖಾ ಚಿತ್ರ, ಫ್ಯಾಷನ್ ಪೆರೆಡ್, ಬ್ಯಾಟ್ಲ್ ಆಫ್ ಬ್ಯಾಂಡ್ಸ್, ಕಾರ್ಟೂನಿಂಗ್, ಮ್ಯಾಡ್ ಆಡ್ಸ್, ಚಹರೆಯ ವರ್ಣ ಕಲೆ, ಮುಂತಾದವುಗಳನ್ನು ನಡೆಸಲಾಗುವುದು.

ಸಿಬ್ಬಂದಿ ಸಲಹೆಗಾರರಾದ ಮನೋಜ್ ಕುಮಾರ್ ಮತ್ತು ಡಾ| ಸುರೇಶ್ ಟಿ. ಉಪಸ್ಥಿತರಿದ್ದರು. ಜೋಯೆಲ್ ರಿಂಸಂ ಪಿಂಟೊ ಮತ್ತು ಪೂರ್ಣಶ್ರೀ ಎಂ.ಟಿ. ಕಾರ್ಯಕ್ರಮ ನಿರೂಪಿಸಿದರು. ಅಂತಿಮ ಪದವಿ ವಿದ್ಯಾರ್ಥಿ ಧನುಷ್ ಸಿ.ಕೆ. ಸ್ವಾಗತಿಸಿದರು. ಅಮೂಲ್ಯ ವಂದಿಸಿದರು.


Spread the love