ಮೀನುಗಾರಿಕಾ ಬೋಟಿಗೆ – ವ್ಯಾಪಾರಿ ಹಡಗು ಡಿಕ್ಕಿ – ಮುನ್ನೆಚ್ಚರಿಕೆಗೆ ಸೂಚನೆ
ಮಂಗಳೂರು: ಸುರತ್ಕಲ್ -ಮಂಗಳೂರು ಸಮೀಪ ಸುಮಾರು 20 ನಾಟಿಕಲ್ ಮೈಲ್ ದೂರ ಸಮುದ್ರಲ್ಲಿ ಮೀನುಗಾರಿಕಾ ಬೋಟಿಗೆ – ವ್ಯಾಪಾರಿ ಹಡಗೊಂದು ಡಿಕ್ಕಿ ಹೊಡೆದ ಘಟನೆ ಮಾರ್ಚ್ 29 ರ ರಾತ್ರಿ ಸಂಭವಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಸುರತ್ಕಲ್ ಬಳಿ MV Chenaya Naree ಎಂಬ ಶಿಪ್ಪಿಗೆ ಮೀನುಗಾರಿಕಾ ಬೋಟ್ ತಾಗಿರುವ ಬಗ್ಗೆ ಕೋಸ್ಟ್ ಗಾರ್ಡ್ ನಿಂದ ಕರಾವಳಿ ಕಾವಲು ಪಡೆಗೆ ಮಾಹಿತಿ ಬಂದಿದ್ದು, ಅದರಂತೆ ಕರಾವಳಿ ಕಾವಲು ಪೊಲೀಸ್ ಠಾಣಾ ಮಂಗಳೂರು ಠಾಣೆಯವರು ಈ ಬಗ್ಗೆ ವಿಚಾರಿಸಿದಾಗ ದಿನಾಂಕ 31-03-2019 ರಂದು ಬೆಂಗ್ರೆ ಸಮೀಪ ಜಖಂ ಗೊಂಡಿರುವ ಮೀನುಗಾರಿಕಾ ಬೋಟ್ ಕಂಡು ಬಂದಿದ್ದು, ಈ ಬೋಟ್ ಜಲ ಪದ್ಮಾವತಿ-II, ರಿಜಿಸ್ಟ್ರೇಷನ್ ನಂಬ್ರ IND-KA-01MM-3712ನೇಯದ್ದು ಆಗಿರುತ್ತದೆ. ಸದ್ರಿ ಮೀನುಗಾರಿಕಾ ಬೋಟ್ ದಿನಾಂಕ 29-03-2019 ರಂದು ರಾತ್ರಿ ಸುಮಾರು 00.20 ಗಂಟೆಯಿಂದ 01.00 ಗಂಟೆ ಮಧ್ಯದಲ್ಲಿ ನವಮಂಗಳೂರು ಬಂದರು ಬ್ರೇಕ್ ವಾಟರ್ ನಿಂದ ಸುಮಾರು 20 ಮೈಲ್ ಸಮುದ್ರ ದೂರದಲ್ಲಿ ಸಿಂಗಾಪೂರ್ ದೇಶಕ್ಕೆ ಸೇರಿದ MV Chenaya Naree ಎಂಬ ಶಿಪ್ಪಿಗೆ ಡಿಕ್ಕಿ ಹೊಡೆದಿರುವುದಾಗಿದೆ. ಸದ್ರಿ ಶಿಪ್ ಸಿಂಗಾಪೂರ್ ನಿಂದ ಕೊಲಾಂಬೋ ಗೆ ಹೊರಟಿರುವ ಸರಕು ಸಾಗಾಣಿಕೆ ಶಿಪ್ ಆಗಿತ್ತು. ಅದೃಷ್ಟವಶಾತ್ 9 ಜನ ಮೀನುಗಾರರು ಅಪಾಯದಿಂದ ಪಾರಾಗಿದ್ದು, ಬೋಟ್ ಗೆ ತುಂಬಾ ನಷ್ಟಯುಂಟಾಗಿರುತ್ತದೆ. ಈ ಮೀನುಗಾರಿಕಾ ಬೋಟ್ ಬೆಂಗ್ರೆ ನಿವಾಸಿ ಶ್ರೀ ಶ್ರೀನಿವಾಸ್ ಸಾಲ್ಯಾನ್ ರವರಿಗೆ ಸೇರಿರುವುದಾಗಿರುತ್ತದೆ.
ಈ ರೀತಿ ಸಮುದ್ರದಲ್ಲಿ ಅನಾಹುತಗಳು ಆಗದಂತೆ ಎಲ್ಲಾ ಮೀನುಗಾರಿಕಾ ಬೋಟ್ ಗಳು AIS (Automatic Identification System) ಅಳವಡಿಸಿಕೊಳ್ಳಬೇಕು ಹಾಗೂ ಬೋಟ್ನ ಎರಡೂ ಬದಿಗೆ ನ್ಯಾವಿಗೇಶನ್ ಲೈಟ್ ಅಳವಡಿಸಿಕೊಳ್ಳುವುದು. ತುರ್ತು ಸಂಧರ್ಭದಲ್ಲಿ ಸಿ.ಎಸ್.ಪಿ ಕಂಟ್ರೋಲ್ ರೂಂ 1093 ನೇಯದಕ್ಕೆ ಕರೆ ಮಾಡಬಹುದಾಗಿದೆ ಎಂದು ಈ ಹಿನ್ನೆಲೆಯಲ್ಲಿ ಎಸ್.ಪಿ, ಸಿ.ಎಸ್.ಪಿ ಮಲ್ಪೆ ರವರು ತಿಳಿಸಿರುತ್ತಾರೆ.