ಮೀನುಗಾರ ಮಹಿಳೆಯರಿಗೆ ಕಾಯಂ ಶೆಡ್ ನಿರ್ಮಾಣವಾಗುವ ತನಕ ತಾತ್ಕಾಲಿಕ ಶೆಡ್ : ಲೋಬೊ

Spread the love

ಮೀನುಗಾರ ಮಹಿಳೆಯರಿಗೆ  ಕಾಯಂ ಶೆಡ್ ನಿರ್ಮಾಣವಾಗುವ ತನಕ ತಾತ್ಕಾಲಿಕ ಶೆಡ್ : ಲೋಬೊ

ಮಂಗಳೂರು: ಬೆಂಗ್ರೆಯ ಮೀನುಗಾರ ಮಹಿಳೆಯರಿಗೆ ಕಾಯಂ ಶೆಡ್ ನಿರ್ಮಾಣವಾಗುವ ತನಕ ತಾತ್ಕಾಲಿಕ ಶೆಡ್ ನಿರ್ಮಿಸಿ ಕೆಲಸ ನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಆದೇಶಿಸಿದರು.

20161007_125143

ಇಂದು ಮೀನುಗಾರ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಪೋರ್ಟ್, ಮೀನುಗಾರಿಕೆ ಮತ್ತು ಮೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದರು.

55 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದ ಕಾಮಗಾರಿ ಕೈಗೊಳ್ಳಲಾಗಿದ್ದು ಅದೂ ಕೂಡ ನಿರುಪಯುಕ್ತವಾಗಿದೆ. ಕಾರಣ ಬಂದರಿಗೆ ರೋಡ್, ಸಂಕ ನಿರ್ಮಿಸಿಕೊಡುವುದಕ್ಕೆ ಕನಿಷ್ಟ 2 ಕೋಟಿ ರೂಪಾಯಿ ಅಗತ್ಯವಿದೆ. ಈ ಹಣ ಸಂಗ್ರಹಿಸುವುದೇ ಸಮಸ್ಯೆಯಾಗಿದೆ.ಆದರೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಪ್ರಯತ್ನ ಮುಂದುವರಿಸಿದ್ದಾರೆ ಎಂದರು.

 ಕೇಂದ್ರ ಸರ್ಕಾರ ಕೊಡಬೇಕಾಗಿರುವ 32 ಕೋಟಿ ರೂಪಾಯಿಯನ್ನು ಕೊಟ್ಟಿಲ್ಲ.ಪರಿಸ್ಥಿತಿ ಹೀಗಿರುವಾಗ 47 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಶ್ವತ ಶೆಡ್ ನಿರ್ಮಿಸಿಕೊಡುವುದು ಕಷ್ಟಸಾಧ್ಯ. ಈ ಹಂತದಲ್ಲಿ ತಾತ್ಕಾಲಿಕ ಶೆಡ್ ಹೊಂದುವುದೇ ಪರಿಹಾರ ಎನ್ನುವ ಶಾಸಕ ಜೆ.ಆರ್.ಲೋಬೊ ಅವರಿಗೆ ಸಹಮತ ತೋರಿದರು.

ಬೆಂಗ್ರೆಯಲ್ಲಿ 2 ಸಾವಿರ ಮನೆಗಳಿದ್ದು ಕೇವಲ 200 ಮನೆಗಳಿಗೆ ಮಾತ್ರ ಹಳದಿ ಕಾರ್ಡ್ ಗಳನ್ನು ಕೊಡಲಾಗಿದೆ ಎಂದು ಮಹಿಳೆಯರು ಗಮನ ಸೆಳೆದಾಗ ಶಾಸಕ ಲೋಬೊ ಅವರು ಮೀನುಗಾರರೇ ವಾಸವಿರುವ ಬೆಂಗ್ರೆಗೆ ಬಿಪಿಎಲ್ ಕಾರ್ಡ್ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ತಾವು ಈ ಬಗ್ಗೆ ಮೇಲಾಧಿಕಾರಿಗಳಿಗೆ ಪತ್ರ  ಬರೆಯುವುದಾಗಿ ತಿಳಿಸಿದರು.

ಬೆಂಗ್ರೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಕೆಯ ಬಗ್ಗೆ ಸೂಚಿಸಿದ ಅವರು ದಾರಿ ದೀಪದ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೀನುಗಾರರಿಗೆ ಸಿಗುವ ಸೌಲಭ್ಯಗಳ ಕುರಿತು ಅಗತ್ಯ ಮಾಹಿತಿ ನೀಡುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಬೆಂಗ್ರೆಯಲ್ಲಿಯೇ ಮಾಹಿತಿ ನೀಡುವ ಕಾರ್ಯಾಗಾರ ಏರ್ಪಡಿಸುವ ಕುರಿತು ಶಾಸಕ ಲೋಬೊ ತಿಳಿಸಿದರು.

 


Spread the love