Home Mangalorean News Kannada News ಮೀನು ವ್ಯಾಪಾರದಲ್ಲಿ ತೊಟ್ಟಂ ಯುವಕನಿಗೆ ಪಾಲುದಾರನಿಂದ ರೂ. 23.71 ಲಕ್ಷ ವಂಚನೆ-ದೂರು ದಾಖಲು

ಮೀನು ವ್ಯಾಪಾರದಲ್ಲಿ ತೊಟ್ಟಂ ಯುವಕನಿಗೆ ಪಾಲುದಾರನಿಂದ ರೂ. 23.71 ಲಕ್ಷ ವಂಚನೆ-ದೂರು ದಾಖಲು

Spread the love

ಮೀನು ವ್ಯಾಪಾರದಲ್ಲಿ ತೊಟ್ಟಂ ಯುವಕನಿಗೆ ಪಾಲುದಾರನಿಂದ ರೂ. 23.71 ಲಕ್ಷ ವಂಚನೆ-ದೂರು ದಾಖಲು

ಉಡುಪಿ: ಯುವಕನೋರ್ವನಿಗೆ ಮೀನಿನ ವ್ಯಾಪಾರದಲ್ಲಿ ಸಹ ಪಾಲುದಾರನೇ ರೂ. 23.71 ಲಕ್ಷ ವಂಚನೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಡಾನಿಡಿಯೂರು ಗ್ರಾಮದ ತೊಟ್ಟಾಂ ನಿವಾಸಿ ಸುನೀಲ್ ಡಿಸೋಜಾ ಮತ್ತು ಉಡುಪಿಯ ವಿಕಾಸ್ ಭಟ್ಟ್ (35) ಮತ್ತು ಹೃತಿಕ್ ಭಟ್ಟ್ (28) ಮಲ್ಪೆಯಲ್ಲಿ ಎಂ.ಜೆ.ಎಫ್ ಮಲ್ಪೆ ಎಂಬ ಹೆಸರಿನ ಪಾಲುದಾರಿಕಾ ಸಮಸ್ಥೆಯಲ್ಲಿ ಮೀನಿನ ವ್ಯಾಪಾರ ಮಾಡಿಕೊಂಡಿದ್ದು, ಇದೇ ಸಂಸ್ಥೆಯಲ್ಲಿ ಪೀಟರ್ ಕರ್ನೆಲಿಯೊ ಮತ್ತು ಫೆಲಿಕ್ಸ್ ಎಂವರು ಕೂಡ ಪಾಲುದಾರರಾಗಿರುತ್ತಾರೆ. ಸುನೀಲ್ ಅವರಿಗೆ ಆರೋಪಿಗಳಾದ ವಿಕಾಸ್ ಮತ್ತು ಹೃತಿಕ್ ಅವರ ಪರಿಚಯ ಮೀನಿನ ವ್ಯಾಪಾರದ ಸಮಯದಲ್ಲೇ ಇದ್ದು ಇವರುಗಳು ಕಾಂಬಟ್ ಇಂಡಸ್ಟ್ರೀಸ್ ಎಂಬ ಫಿಶರಿಸ್ ಸಂಸ್ಥೆಯನ್ನು 2017 ರಲ್ಲಿ ಕೂಡ ಆರಂಬಿಸಿರುತ್ತಾರೆ. ಸುನಿಲ್ ಅವರು ನಡೆಸುತ್ತಿರುವ ಎಂ ಜೆ ಎಫ್ ಫಿಶರಿಸ್ ನಿಂದ 2018ರಿಂದ ಆರೋಪಿಗಳಾದ ವಿಕಾಸ್ ಭಟ್ ಮತ್ತು ಹೃತಿಕ್ ಭಟ್ಟ್ ಅವರಿಗೆ ಒಟ್ಟು ರೂ 23,71,950 ಮೌಳ್ಯದ ಮೀನನ್ನು ಬಿಲ್ ಸಮೇತ ನೀಡಲಾಗಿರುತ್ತದೆ.

2019 ಡಿಸೆಂಬರ್ 24 ರಂದು ವಿಕಾಸ್ ಅವರು ಹೃತಿಕ್ ಭಟ್ಟ್ ಹೆಸರಿನಲ್ಲಿ ರೂ 2,50 ಲಕ್ಷ ರೂಪಾಯಿ ಚೆಕ್ಕನ್ನು ನೀಡಿದ್ದ ಬ್ಯಾಂಕಿನಲ್ಲಿ ಹಣವಿಲ್ಲವೆಂದು ಚೆಕ್ ಬೌನ್ಸ್ ಆಗಿರುತ್ತದೆ. ಅದರ ಬಳಿಕ ಇಬ್ಬರು ಆರೋಪಿಗಳು ಕೂಡ ಸುನೀಲ್ ಅವರ ಸಂಪರ್ಕಕ್ಕೆ ಸಿಗದೆ ಇದ್ದು ಹಣ ಕೇಳಿದಾಗ ಇವತ್ತು ನಾಳೆ ಕೊಡುತ್ತೇನೆ ಎಂದು ಹೇಳಿರುತ್ತಾರೆ. ಅಲ್ಲದೆ ಸುನೀಲ್ ಅವರಿಗೆ ಮೋಸ ಮಾಡುವ ಉದ್ದೇಶದಿಂದ   23,71,950 ಮೌಲ್ಯದ ಮೀನನ್ನು ಪಡೆದು ಹಣ ನೀಡದೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿರುತ್ತಾರೆ. ಈ ಬಗ್ಗೆ ವಿಕಾಸ್ ಮತ್ತು ಹೃತಿಕ್ ಭಟ್ಟ್ ಅವರಲ್ಲಿ ಕೇಳಿದಾಗ ಹಣ ಕೊಡುವುದಿಲ್ಲ, ನೀನು ಏನು ಬೇಕಾದರೂ ಮಾಡಿಕೋ ಮುಂದೆ ನಮ್ಮ ಬಳಿ ಬಂದಲ್ಲಿ ಕೈಕಾಲು ಕಡಿದು ಕೊಂಡು ಹಾಕುವುದಾಗಿ ಬೆದರಿಕೆ ಹಾಕಿ ಅವಾಚ್ಯಾ ಶಬ್ದಗಳಿಂದ ನಿಂದಿಸಿರುವುದಾಗಿ ಸುನೀಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಕಾಸ್ ಭಟ್ ಮೇಲೆ ಆತನ ಕೆಲಸಗಾರರು ಕೂಡ ಸಂಬಳ ಕೊಡದ ವಿಚಾರದಲ್ಲಿ ಕಾಪು ಠಾಣೆಯಲ್ಲಿ ಕೂಡ ದೂರು ದಾಖಲಾಗಿದೆ.

(ವಿ.ಸೂ: ಇಲ್ಲಿ ಪ್ರಕಟವಾಗಿರುವ ಮಾಹಿತಿ ಹಾಗೂ ವಿಚಾರಗಳು ಸಂಪೂರ್ಣವಾಗಿ ದೂರುದಾರ ಸುನೀಲ್ ಡಿಸೋಜಾರು ನೀಡಿದ್ದಾಗಿದ್ದು, ಇದರ ಸಾಧಕ ಭಾಧಕಗಳಿಗೆ ಅವರೇ ಜವಾಬ್ದಾರಾಗಿದ್ದಾರೆ ಇದರಲ್ಲಿನ ಮಾಹಿತಿ ಹಾಗೂ ವಿಚಾರಗಳಿಗೆ ಮ್ಯಾಂಗಲೋರಿಯನ್ ಡಾಟ್ ಕಾಮ್ ಮಾಧ್ಯಮ ಸಂಸ್ಥೆ ಯಾವುದೇ ರೀತಿಯಲ್ಲಿ ಜವಾಬ್ದಾರಲ್ಲ. ಸಂಪಾದಕರು)


Spread the love

Exit mobile version