Home Mangalorean News Kannada News ಮುಂದಿನ 20-30 ದಿನ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಇಲ್ಲ – ಪರ್ಯಾಯ ಅದಮಾರು...

ಮುಂದಿನ 20-30 ದಿನ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಇಲ್ಲ – ಪರ್ಯಾಯ ಅದಮಾರು ಕಿರಿಯ ಸ್ವಾಮೀಜಿ

Spread the love

ಮುಂದಿನ 20-30 ದಿನ ಕೃಷ್ಣ ಮಠದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಇಲ್ಲ – ಪರ್ಯಾಯ ಅದಮಾರು ಕಿರಿಯ ಸ್ವಾಮೀಜಿ

ಉಡುಪಿ: ಜೂನ್ 8 ರ ನಂತರ ದೇವಸ್ಥಾನಗಳನ್ನು ತೆರೆಯುವಂತೆ ಸರಕಾರ ಅವಕಾಶ ಕೊಟ್ಟಿದೆ ಆದರೆ ವಿಶ್ವಪ್ರಸಿದ್ದ ಕೃಷ್ಣ ಮಠದಲ್ಲಿ ಇನ್ನೂ 20 ರಿಂದ 30 ದಿನ ಕಾಯುತ್ತೇವೆ ಮತ್ತು ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಅದಮಾರು ಕಿರಿಯ ಸ್ವಾಮೀಜಿ ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ ನಮಗೆ ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿ ಆರೋಗ್ಯ ಮುಖ್ಯ. ಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡ ಪರಂಪರೆ ಇದ್ದು, ಇಲ್ಲಿ ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯ ಇದೆ.

ಶ್ರೀಕೃಷ್ಣ ಮಠಕ್ಕೆ ಪ್ರತಿದಿನ 1 ಲಕ್ಷ ರುಪಾಯಿಯಷ್ಟು ಖರ್ಚು ಇದ್ದು, ಲಾಕ್ ಡೌನ್ ಸಂದರ್ಭದಲ್ಲಿ ನಮ್ಮೆಲ್ಲಾ ಸಿಬ್ಬಂದಿಗಳಿಗೆ ಸಂಬಳ ಕೊಡುತ್ತಿದ್ದೇವೆ. ಮಠ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ. ಕೊರೊನಾ ಸೋಂಕು ಶೀಘ್ರ ದೂರವಾಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಮತ್ತು ಕೋರೊನಾ ನಿರ್ವಹಣೆಯಲ್ಲಿ ಸರಕಾರಗಳ – ಅಧಿಕಾರಿಗಳ ಕಾರ್ಯ ಶ್ಲಾಘನೀಯವಾದುದು ಎಂದು ಅವರು ತಿಳಿಸಿದ್ದಾರೆ.


Spread the love

Exit mobile version