ಮುಂದುವರೆದ ಕಾರ್ಯಾಚರಣೆ; ಸರ್ವಿಸ್ ಬಸ್ಸುಗಳ ಕರ್ಕಶ ಹಾರ್ನ್ ತೆರವು

Spread the love

ಮುಂದುವರೆದ ಕಾರ್ಯಾಚರಣೆ; ಸರ್ವಿಸ್ ಬಸ್ಸುಗಳ ಕರ್ಕಶ ಹಾರ್ನ್ ತೆರವು

ಉಡುಪಿ: ನಗರ ವ್ಯಾಪ್ತಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಪಿ ಎಸ್ ಐ ಸುದರ್ಶನ್ ದೊಡ್ಡಮನಿ ನೇತೃತ್ವದಲ್ಲಿ ಮಂಗಳವಾರ ಮತ್ತೆ ಖಾಸಗಿ ಬಸ್ಗಳ ಕರ್ಕಶ ಹಾರ್ನ್ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು.

ಜೂ.3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್ ಗಳಲ್ಲಿ ಅಳವಡಿಸಲಾದ ಕರ್ಕಶ ಹಾರ್ನ್ ಗಳನ್ನು ಜೂ.15ರೊಳಗೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆಸಂಚಾರ ಪೊಲೀಸರು ನೀಡಿರುವ ಗಡುವು ಮುಗಿದ ಹಿನ್ನೆಲೆಯಲ್ಲಿ ಭಾನುವಾರ ಕಾರ್ಯಾಚರಣೆ ನಡೆಸಿ ಉಡುಪಿ ಸಿಟಿ ಬಸ್ ಗಳ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಿ ದಂಡ ವಿಧಿಸಿದ್ದು ಮಂಗಳವಾರ ಸರ್ವಿಸ್ ಬಸ್ ನಿಲ್ದಾಣದಲ್ಲಿ ಕೂಡ ಕಾರ್ಯಾಚರಣೆ ನಡೆಸಿದರು.

ಕಾರ್ಯಾಚರಣೆ ನಡೆಸಿದ ವೇಳೆ ಸುಮಾರು ಸುಮಾರು 14 ಬಸ್ ಗಳಲ್ಲಿದ್ದ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಲಾಯಿತು. ಬಸ್ ಗಳ ವಿರುದ್ಧ ತಲಾ 500ರೂ.ನಂತೆ ಒಟ್ಟು 70000 ರೂ. ದಂಡ ವಿಧಿಸಲಾಯಿತು.


Spread the love
Subscribe
Notify of

0 Comments
Inline Feedbacks
View all comments