ಮುಂಬಯಿ: ಸರ್ವ ಗುಣಗಳಲ್ಲೂ ಯುಕ್ತರಾಗಿ ಓರ್ವ ನೇತ ಮತ್ತು ತತ್ವಜ್ಞಾನಿ ಎಂದೆಣಿಸಿದ ಗಣಪತಿಯು ತತ್ವವೇದ ಮತ್ತು ನೇತರಣಿಸಿದ ದೇವರು ಎಂಬುವುದು ತಿಳುವಳಿಕೆ. ನೇತರಲ್ಲಿ ನಿಷ್ಠೆಯ ಸದ್ಗುಣ ಪ್ರಾಮುಖ್ಯವಾದದ್ದು ಎಂಬುವುದು ಗಣಪತಿ ಮೂರ್ತಿಯಿಂದ ಕಲಿಯ ಬಹುದು. ಹದಿನಾಲ್ಕು ವಿದ್ಯೆಯನ್ನರಿತ, ಅರ್ವತ್ತನಾಲ್ಕು ಕಲೆಗಳ ಅಧಿಪತಿ ಆಗಿದ್ದ ಗಣಪ ಸರ್ವರಿಗೂ ಪ್ರೇರಕ ದೇವರು. ಇಂತಹ ದೇವರ ವಿಚಾರಗಳನ್ನು ಮುಂಬಂ¬ಗರು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಬಾಳುವುದರಿಂದಲೇ ಮಾಯಾನಗರಿಯ ಜನತೆಯಲ್ಲಿ ಏಕತೆಯ ಬಾಳು ಬೆಳಗುತ್ತಿದೆ ಎನ್ನುವುದು ದೃಷ್ಟಾಂತ.
ಇತ್ತೀಚಿನ ವರುಷಗಳಲ್ಲಿ ಗಣೇಶನ ಪ್ರತಿಮಾ ಮತ್ತು ಪ್ರತೀಕದ ಅರ್ಥ ಪುರಾಣಕಥೆಗಳಲ್ಲಿ ಶೋಭಿಸುವ ಐತಿಹಾಸಿಕ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವಂತಿದೆ. ವಿನಾಯಕನ ರೂಪ ಉಪಸನದ ಪದ್ಧತಿಯಲ್ಲಿ ಬದಲಾದಂತೆ ಕಾಣುದಕ್ಕೆ ಗಣಪತಿಯ ಅವತಾರವನ್ನು ವಿಗ್ರಹ ನಿರ್ಮಿಸುವ ಕಲಾಕಾರರು ರಚಿಸುವ ಪ್ರತಿಕೃತಿಯೇ ಸಾಕ್ಷಿ.
ವಿಘ್ನವಿನಾಯಕನ ಆರಾಧನೆಗೆ ಪ್ರಮುಖಾಕಷರ್Àವಾದ ಬಾಲಿವುಡ್ ರಂಗವು ಈ ಬಾರಿಯೂ ಗಣೇಶೋತ್ಸವಕ್ಕೆ ಮೆರುಗು ನೀಡಿತು. ಅಂತೆಯೇ ರಾಜಕಾರಣಿ, ಕ್ರಿಕೇಟ್ ರಂಗದ ದಿಗ್ಗಜರೂ ತತ್ವಜ್ಞಾನಿ ಗಣಪತಿಗೆ ನಮಿಸಿದರು. ಚಿತ್ರರಂಗದ ಹಿರಿಯ ನಟನಟಿಯರುಗಳಾದ ಮೋಹನ್ ಜೋಶಿ, ಜಿತೇಂದ್ರ, ತುಷಾರ್ ಕಫೂರ್, ನಾನಾ ಪಾಟೇಕರ್, ಗೋವಿಂದ, ನೀಲ್ ನಿತಿನ್ ಮುಖೇಶ್, ವಿವೇಕ್ ಒಬೆರಾಯ್, ಸೋನು ಸೂಡ್, ಪ್ರಸಿದ್ಧ ಸಂಗೀತಗಾರ ಸುರೇಶ್ ವಾಡ್ಕರ್ ಮತ್ತಿತರರು ತಮ್ಮ ತಮ್ಮ ನಿವಾಸಗಳಲ್ಲಿ ಗಣೇಶ ಸ್ತುತಿಗೈದರು. ಕ್ರಿಕೇಟ್ ರಂಗದ ಸಚಿನ್ ತೆಂಡೂಲ್ಕರ್, ಪತ್ನಿ ಅಂಜಲಿ ಸಚಿನ್ ಪರಿವಾರ, ರಾಜಕಾರಣದ ದಿಗ್ಗಜ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶ್ಹಾ ಅವರು ಲಾಲ್ಭಾಗ್ ಕಾ ರಾಜಾ ವಿನಾಯಕನನ್ನು ಭೇಟಿಗೈದು ಇಷ್ಟಾರ್ಥಗಳನ್ನು ಈಡೇರಿಸಲು ಮೊರೆಹೋದರು.